ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ಅಂಬರೀಶ್‌ ಜನ್ಮದಿನ; ಸಮಾಧಿಗೆ ಪೂಜೆ

Published 29 ಮೇ 2024, 13:45 IST
Last Updated 29 ಮೇ 2024, 13:45 IST
ಅಕ್ಷರ ಗಾತ್ರ

ಬೆಂಗಳೂರು: ನಟ, ದಿವಂಗತ ಅಂಬರೀಶ್‌ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬುಧವಾರ(ಮೇ 29) ನಟಿ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್‌ ಅಂಬರೀಶ್‌ ಹಾಗೂ ಅವರ ಪತ್ನಿ ಅವಿವಾ ಬಿದ್ದಪ್ಪ ಕಂಠೀರವ ಸ್ಟುಡಿಯೊದಲ್ಲಿರುವ ಅಂಬರೀಶ್‌ ಸಮಾಧಿಗೆ ಪೂಜೆ ಸಲ್ಲಿಸಿದರು.

ಅಂಬರೀಶ್‌ ಅವರ 72ನೇ ಜನ್ಮದಿನದ ಅಂಗವಾಗಿ ಸಮಾಧಿ ಮುಂದೆ ಅಂಬರೀಶ್‌ ಅವರಿಗೆ ಪ್ರಿಯವಾಗಿದ್ದ ಖಾದ್ಯಗಳನ್ನು ಇಟ್ಟು ಕುಟುಂಬದ ಸದಸ್ಯರು ಪುಷ್ಪನಮನ ಸಲ್ಲಿಸಿದರು. ಸಾವಿರಾರು ಅಭಿಮಾನಿಗಳು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಸ್ಥಳದಲ್ಲಿ ಅಭಿಮಾನಿಗಳಿಗೆ ಅನ್ನದಾನವನ್ನೂ ಏರ್ಪಡಿಸಲಾಗಿತ್ತು.    

ಈ ವೇಳೆ ಮಾತನಾಡಿದ ಸುಮಲತಾ ಅಂಬರೀಶ್‌, ‘ಅಂಬರೀಶ್‌ ನಮ್ಮನ್ನು ಅಗಲಿ ಆರು ವರ್ಷ ಉರುಳಿದೆ. ಆದರೂ ನಮ್ಮ ಮನಸ್ಸಿನಲ್ಲಿ, ಪ್ರೀತಿಸುವ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ಇನ್ನೂ ಇದ್ದಾರೆ. ಆ ಪ್ರೀತಿಯಲ್ಲೇ ಅಂಬರೀಶ್‌ ಅವರನ್ನು ಕಾಣುತ್ತೇನೆ. ಅಂಬರೀಶ್‌ ಅವರು ಆಹಾರ ಪ್ರಿಯ. ಅವರಿಗೆ ಇಷ್ಟವಾದ ತಿಂಡಿ–ತಿನಿಸುಗಳನ್ನು ಜನ್ಮದಿನದಂದು ಮಾಡುತ್ತಿದ್ದೆವು. ಇದೀಗ ಅವುಗಳನ್ನು ಸಮಾಧಿ ಮುಂದೆ ಎಡೆ ಇಟ್ಟಿದ್ದೇವೆ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT