ಬೆಂಗಳೂರು: ತೆಲುಗು ಸಿನಿಮಾ ವಿತರಕ, ನಿರ್ಮಾಪಕ ಕೆ.ಪಿ ಚೌಧರಿ (44) ಎನ್ನುವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಗೋವಾದ ಪಣಜಿ ಬಳಿಯ ಶಿವೊಲಿಮ್ ಪ್ರದೇಶದ ಬಾಡಿಗೆ ಮನೆಯಲ್ಲಿ ಸೋಮವಾರ ಪತ್ತೆಯಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಉತ್ತರ ಗೋವಾ ಪೊಲೀಸರು, ಕೆ.ಪಿ ಚೌಧರಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.

ತೆಲಂಗಾಣದ ಕಮ್ಮಂ ಜಿಲ್ಲೆಯ ಮೂಲದ ಚೌಧರಿ ಅವರು ತೆಲುಗಿನಲ್ಲಿ ಬಿಡುಗಡೆಯಾಗಿದ್ದ ರಜನಿಕಾಂತ್ ಅವರ ಕಬಾಲಿ ಸಿನಿಮಾ ವಿತರಣೆ ಮಾಡಿದ್ದರು. ಅಲ್ಲದೇ ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

ಮೆಕಾನಿಕಲ್ ಎಂಜಿನಿಯರ್ ಆಗಿದ್ದ ಅವರು ಸಿನಿಮಾ ಕ್ಷೇತ್ರದ ಸೆಳೆತದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಟಾಲಿವುಡ್ನ ಹಲವು ಸೆಲಿಬ್ರಿಟಿಗಳ ಜೊತೆ ನಂಟು ಹೊಂದಿದ್ದರು.

2023 ರಲ್ಲಿ 93 ಗ್ರಾಂ ಕೊಕೇನ್ ಹೊಂದಿದ್ದ ಆರೋಪದ ಮೇಲೆ ಸೈಬರಾಬಾದ್ ಪೊಲೀಸರು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿತ್ತು.

ಸಿನಿಮಾ ವಿತರಣೆಯಿಂದ ಕೆ.ಪಿ ಚೌಧರಿ ಅವರು ಕ್ರಮೇಣ ಡ್ರಗ್ ಪೆಡ್ಲರ್ ಆಗಿ ಬದಲಾಗಿದ್ದರು. ಅಲ್ಲದೇ ಅವರು ಗೋವಾದ ಕೆಲ ಡ್ರಗ್ ಕಿಂಗ್ಪಿನ್ಗಳ ಜೊತೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿತ್ತು. ಇದರಿಂದ ವೃತ್ತಿ ಹಣಕಾಸು ಸಮಸ್ಯೆ ಹಾಗೂ ವೈಯಕ್ತಿಕ ಜೀವನದಲ್ಲಿ ಕುಗ್ಗಿದ್ದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಕುರಿತು ತೆಲಂಗಾಣ ಟುಡೇ ವೆಬ್ಸೈಟ್ ವರದಿ ಮಾಡಿದೆ. ಅಲ್ಲದೇ ನಾರ್ಥ್ ಗೋವಾ ಎಸ್ಪಿ ಈ ವಿಷಯವನ್ನು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.