ಭಾನುವಾರ, ಮೇ 29, 2022
30 °C

ವಿಡಿಯೊ: ಡ್ಯಾನ್ಸ್‌ ಮಾಡುವಂತೆ ಬಾಹುಬಲಿ ನಟಿ ತಮನ್ನಾ ಚಾಲೆಂಜ್ ಮಾಡಿದ್ದು ಯಾರಿಗೆ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಬಹುಭಾಷಾ ನಟಿ ತಮನ್ನಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ತಾವೂ ಕೂಡ ಡ್ಯಾನ್ಸ್‌ ಮಾಡುವಂತೆ ಅಭಿಮಾನಿಗಳಿಗೆ ಚಾಲೆಂಜ್‌ ಮಾಡಿದ್ದಾರೆ.

ನಟಿ ವರುಣ್ ತೇಜ್ ಅಭಿನಯದ ‘ಗನಿ’ ಸಿನಿಮಾ ‘ಕೊಡ್ತೇ’ ಹಾಡಿಗೆ ನೃತ್ಯ ಮಾಡಿರುವ ವಿಡಿಯೊವನ್ನು ತಮನ್ನಾ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಡ್ಯಾನ್ಸ್‌ ಚಾಲೆಂಜ್‌ ಆರಂಭಿಸಿದ್ದಾರೆ. ಜತೆಗೆ ಚಾಲೆಂಜ್‌ ಸ್ವೀಕರಿಸುವಂತೆ ವರುಣ್ ತೇಜ್ ಮತ್ತು ಸಾಯಿ ಮಂಜ್ರೇಕರ್​ ಅವರಿಗೆ ಟ್ಯಾಗ್ ಮಾಡಿದ್ದಾರೆ.

‘ಹೆಚ್ಚು ಅವಕಾಶ ತೆಗೆದುಕೊಳ್ಳಿ. ಹೆಚ್ಚು ನೃತ್ಯ ಮಾಡಿ. ನಾನು ‘ಕೊಡ್ತೇ’ ಹಾಡಿಗೆ ನೃತ್ಯ ಮಾಡುತ್ತಿದ್ದೇನೆ. ಈಗ ನಿಮ್ಮ ಸರದಿ! #KodtheDanceChallenge ಅನ್ನು ತೆಗೆದುಕೊಳ್ಳಲು ನಿಮ್ಮಿಬ್ಬರಿಗೂ ಸವಾಲು ಹಾಕುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ‘ಗನಿ’ ಸಿನಿಮಾದ ಹಾಡಿನ ಪೋಸ್ಟರ್‌ವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದರು. ಇದೀಗ ವಿಡಿಯೊವನ್ನು 5.04 ಲಕ್ಷ ಮಂದಿ ಇಷ್ಟಪಟ್ಟಿದ್ದಾರೆ.

‘ಬಾಹುಬಲಿ’, ‘ಸೈರಾ ನರಸಿಂಹ ರೆಡ್ಡಿ’, ‘ಎಫ್‌ –2’ ಚಿತ್ರಗಳಲ್ಲಿ ಅಭಿನಯಿಸಿದ್ದ ತಮನ್ನಾ, ಹೆಚ್ಚು ಖ್ಯಾತಿ ಗಳಿಸಿದ್ದಾರೆ.

ಕಿರಣ್ ಕೊರ್ರಪಾಟಿ ನಿರ್ದೇಶನದ 'ಗನಿ' ಚಿತ್ರ ಇದೇ ಮಾರ್ಚ್‌ 18ರಂದು ಚಿತ್ರ ಬಿಡುಗಡೆಯಾಗಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು