ಟಾಕ್ಸಿಕ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕೂತೂಹಲಕ್ಕೆ ಚಿತ್ರತಂಡ ಗುರುವಾರ (ಜ.8) ತೆರೆ ಎಳೆದಿದೆ. ಯಶ್ ಹುಟ್ಟುಹಬ್ಬ ನಿಮಿತ್ತ ‘ಟಾಕ್ಸಿಕ್’ ಸಿನಿಮಾದಲ್ಲಿನ ‘ರಾಯ’ ಪಾತ್ರವನ್ನು ಪರಿಚಯಿಸುವ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ.

ನಿನ್ನೆ ಬೆಳಿಗ್ಗೆ 10 ಗಂಟೆ 10 ನಿಮಿಷಕ್ಕೆ ಯಶ್ ಟಾಕ್ಸಿಕ್ನಲ್ಲಿ ನಟಿಸಿರುವ ಪಾತ್ರವನ್ನು ಅನಾವರಣಗೊಳಿಸುವ ಮೂಲಕ ಸಿನಿಮಾನವನ್ನು ಹಾಲಿವುಡ್ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಇದೀಗ ಒಂದೇ ದಿನದಲ್ಲಿ ಟಾಕ್ಸಿಕ್ ವಿಡಿಯೊ ದಾಖಲೆಯ ವೀಕ್ಷಣೆ ಪಡೆದುಕೊಂಡಿದೆ. ಇದೀಗ ಯೂಟ್ಯೂಬ್ನಲ್ಲಿ ಬರೋಬ್ಬರಿ 5.6 ಕೋಟಿ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ.

.ಇವರೇ ರಾಯನ ಜೊತೆ ಕಾರಿನೊಳಗಿದ್ದ ಬ್ಯೂಟಿ; ಟಾಕ್ಸಿಕ್ ಸುಂದರಿಗಾಗಿ ಹುಡುಕಾಟ ಶುರು.‘ಟಾಕ್ಸಿಕ್’ ಅಖಾಡದಲ್ಲಿ ಪವರ್ಫುಲ್ ನಟಿಯರ ದಂಡು: ಯಶ್ ಮುಂದೆ ಅಬ್ಬರಿಸಲು ಸಿದ್ಧ.
ನಟ ಯಶ್ ಪಾತ್ರವನ್ನು ಪರಿಚಯಿಸಿರುವ 2.51 ನಿಮಿಷಗಳ ವಿಡಿಯೊ ವೀಕ್ಷಿಸಿದ ಅಭಿಮಾನಿಗಳು ದಂಗಾಗಿದ್ದಾರೆ. ಜೊತೆಗೆ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಇದೇ ಮೊದಲ ಬಾರಿಗೆ ಹಿಂದೆಂದೂ ಕಾಣಿಸದ ಲುಕ್ನಲ್ಲಿ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದಾರೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಹಾಲಿವುಡ್ ನಟಿ ನಟಾಲಿಯಾ ಬರ್ನ್ ಎಂಟ್ರಿ ಕೊಟ್ಟಿದ್ದು. ವಿಡಿಯೊ ಬಿಡುಗಡೆಯಾಗುತ್ತಿದ್ದಂತೆ ಹಸಿಬಿಸಿ ದೃಶ್ಯವೊಂದು ಕಾಣಿಸಿದೆ. ಸದ್ಯ, ಯಶ್ ಜೊತೆಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಸುಂದರಿ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ.

ಈಗಾಗಲೇ ಟಾಕ್ಸಿಕ್ ಸಿನಿಮಾದಲ್ಲಿ ಅಭಿನಯಿಸಿರುವ ನಟಿಯರ ಹೆಸರನ್ನು ಘೋಷಿಸಲಾಗಿದೆ. ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಹಾಗೂ ತಾರಾ ಅವರ ಪಾತ್ರಗಳನ್ನು ಪರಿಚಯಿಸಲಾಗಿದೆ.

ಗೀತು ಮೋಹನ್ದಾಸ್ ಅವರು ಟಾಕ್ಸಿಕ್ ಸಿನಿಮಾದ ನಿರ್ದೇಶಕಿಯಾಗಿದ್ದು, ‘ಟಾಕ್ಸಿಕ್’ನಲ್ಲಿ ನಟನಾಗಿ, ಸಹ–ಬರಹಗಾರರಾಗಿ, ಸಹ–ನಿರ್ಮಾಪಕನಾಗಿ ಯಶ್ ಹೊಸ ಹೆಜ್ಜೆ ಇಟ್ಟಿದ್ದಾರೆ. ವೆಂಕಟ್ ಕೆ.ನಾರಾಯಣ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಾನ್ಸ್ಟರ್ಮೈಂಡ್ ಕ್ರಿಯೇಷನ್ಸ್ನಡಿ ಯಶ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ‘ಕೆ.ಜಿ.ಎಫ್’ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ರಾಜೀವ್ ರವಿ ಛಾಯಾಚಿತ್ರಗ್ರಹಣ, ಉಜ್ವಲ್ ಕುಲಕರ್ಣಿ ಸಂಕಲನ, ಟಿಪಿ ಅಬಿದ್ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.