ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ಮಾರ್ಚ್ 2ರಂದು ಬಿಡುಗಡೆಯಾಗಿದೆ.

ಟಾಕ್ಸಿಕ್ ಸಿನಿಮಾದ ‘ತಬಾಹಿ’ ಹಾಡು‘ ಎಲ್ಲಾ ಮಿತಿ ಮೀರಿ ಹೋಗೋಣ ಬಾ... ಎಲ್ಲಾ ಗಡಿ ದಾಟಿ ನೋಡೋಣ ಬಾ... ಶೃಂಗಾರ ದಂಗಾರ ಸಿಡಿದೇಳಲು ತಬಾಹಿ... ಹೀಗೆ ಈ ಹಾಡು ಮುಂದುವರೆಯುತ್ತದೆ.
.ಟಾಕ್ಸಿಕ್ ಸಿನಿಮಾದ ತಬಾಹಿ ಹಾಡು ಬಿಡುಗಡೆ: ರೊಮ್ಯಾಂಟಿಕ್ ಲುಕ್ನಲ್ಲಿ ಯಶ್–ಕಿಯಾರ.
ಕನ್ನಡದಲ್ಲಿ ಈ ಹಾಡಿಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದು, ಬಿಡುಗಡೆಯಾದ ಒಂದು ದಿನದಲ್ಲಿ 16 ಲಕ್ಷ ವೀಕ್ಷಣೆ ಕಂಡಿದೆ. ಈ ಹಾಡಿಗೆ ಹಿಂದಿಯಲ್ಲಿ ರಾಜಶೇಖರ್ ಅವರು ಸಾಹಿತ್ಯ ಬರೆದಿದ್ದಾರೆ. ಇದು 18 ಲಕ್ಷ ಪಡೆದುಕೊಂಡಿದೆ. ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ ಅವರು ಗೀತೆ ಬರೆದಿದ್ದು, 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ತಮಿಳಿನಲ್ಲಿ ವಿಘ್ನೇಶ್ ಶಿವನ್ ಅವರು ಸಾಹಿತ್ಯ ಬರೆದಿದ್ದು, ಇದು 1 ಲಕ್ಷದ 71 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಮಲಯಾಳಂನಲ್ಲಿ ರಫೀಕ್ ಅಹ್ಮದ್ ಅವರ ಬರೆದ ‘ತಬಾಹಿ‘ ಗೀತೆಯು 70 ಸಾವಿರಕ್ಕೂ ಅಧಿಕ ಪಡೆದುಕೊಂಡಿದೆ.

ಇನ್ನೂ, ಸಿನಿಮಾವು ಮಾರ್ಚ್ 19ರಂದು ರಿಲೀಸ್ ಆಗಲಿದೆ. ಟಾಕ್ಸಿಕ್'ನಲ್ಲಿ ನಟನಾಗಿ, ಸಹ-ಬರಹಗಾರರಾಗಿ, ಸಹ-ನಿರ್ಮಾಪಕನಾಗಿ ಯಶ್ ಹೊಸ ಹೆಜ್ಜೆ ಇಟ್ಟಿದ್ದು, ವೆಂಕಟ್ ಕೆ.ನಾರಾಯಣ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮಾನ್ಸ್ಟಮೈಂಡ್ ಕ್ರಿಯೇಷನ್ಸ್ನಡಿ ಯಶ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.