ಗುರುವಾರ , ಸೆಪ್ಟೆಂಬರ್ 23, 2021
21 °C

ಭಾರತಿ ವಿಷ್ಣುವರ್ಧನ್‌ ಕುರಿತ ’ಬಾಳೇ ಬಂಗಾರ’ ಸಾಕ್ಷ್ಯಚಿತ್ರದ ಟ್ರೈಲರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿರಿಯ ನಟಿ ಭಾರತಿ ಅವರ ಜೀವನ ಹಾಗೂ ಸಿನಿಮಾ ಪಯಣದ ಕುರಿತಾದ ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರವನ್ನು ಭಾರತಿ ಅವರ ಅಳಿಯ ಅನಿರುದ್ಧ ನಿರ್ಮಾಣ ಮಾಡಿದ್ದು ಅದರ ಟ್ರೈಲರ್‌ ಅನ್ನು ಬಿಡುಗಡೆ ಮಾಡಿದ್ದಾರೆ.

ಭಾರತಿ ಅವರ ಜನ್ಮದಿನವಾದ ನಿನ್ನೆ (ಅಗಸ್ಟ್‌ 15) ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದೆ.

ಭಾರತಿ ಅವರು ತಮ್ಮ ಜೀವನದ ಏಳು–ಬೀಳುಗಳುನ್ನು ಅನಿರುದ್ಧ ಅವರೊಂದಿಗೆ ಹಂಚಿಕೊಂಡಿದ್ದಾರೆ. ಹಾಗೇ ವಿಷ್ಣು ಕುರಿತಾಗಿಯೂ ಮಾತನಾಡಿದ್ದಾರೆ. ಭಾರತಿ ಬಗ್ಗೆ ಹಿರಿಯ ನಟರಾದ ಶಿವರಾಂ, ಅನಂತ್‌ ನಾಗ್, ಶಿವರಾಜ್‌ ಕುಮಾರ್‌ ಮಾತನಾಡಿದ್ದಾರೆ. ನಿರ್ದೇಶಕ ಭಾರ್ಗವ, ನಟಿ ಹೇಮಾ ಚೌಧರಿ ಕೂಡ ಭಾರತಿ ಅವರ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

ವಿಶೇಷವಾಗಿ ಮಲಯಾಳಂ ನಟ ಮೋಹನ್‌ ಲಾಲ್ ಕೂಡ ಭಾರತಿ ಕುರಿತಾಗಿ ಮಾತನಾಡಿದ್ದಾರೆ.

ಕೀರ್ತಿ ಇನ್ನೊವೇಶನ್‌ ಬ್ಯಾನರ್ ಅಡಿಯಲ್ಲಿ ಅನಿರುದ್ಧ ಈ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪರಿಕಲ್ಪನೆಯೊಂದಿಗೆ ನಿರೂಪಣೆಯನ್ನು ಅನಿರುದ್ಧ ಅವರೇ ಮಾಡಿದ್ದಾರೆ. ಭಾರತಿ ಅವರ ಬದುಕಿನ ಮೇಲೆ ಬೆಳಕು ಚೆಲ್ಲುವ ಈ ಸಾಕ್ಷ್ಯಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು