ಸೋಮವಾರ, ಮೇ 23, 2022
30 °C

ಸರ್ಕಾರು ವಾರಿ ಪಾಟ ಚಿತ್ರದ ಟ್ರೈಲರ್‌, ಸಾಂಗ್ ಲೀಕ್: ಪ್ರಿನ್ಸ್‌ ಅಭಿಮಾನಿಗಳು ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಪ್ರಿನ್ಸ್‌ ಖ್ಯಾತಿಯ ತೆಲುಗು ನಟ ಮಹೇಶ್‌ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ’ ಚಿತ್ರದ ಟ್ರೈಲರ್‌ ಸೋರಿಕೆಯಾಗಿರುವುದಕ್ಕೆ ಅಭಿಮಾನಿಗಳು ಗರಂ ಆಗಿದ್ದಾರೆ.

ಮಹೇಶ್‌ ಬಾಬು ಅವರ ಮಾಸ್‌ ದೃಶ್ಯಗಳು ಹಾಗೂ ಡೈಲಾಗ್‌ಗಳು ಸೋರಿಕೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ಕುಪಿತರಾಗಿರುವ ಮಹೇಶ್‌ ಬಾಬು ಅಭಿಮಾನಿಗಳು ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೋವಿ ಮೇಕರ್ಸ್ ವಿರುದ್ಧ ಗರಂ ಆಗಿದ್ದಾರೆ.

ಈ ಹಿಂದೆ ಇದೇ ಸಿನಿಮಾದ ಎರಡು ಹಾಡುಗಳು ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿದ್ದವು. ಕಲಾವತಿ ಹಾಗೂ ಪೆನ್ನಿ ಸಾಂಗ್‌ ವಿಡಿಯೊಗಳು ಲೀಕ್‌ ಆಗಿದ್ದವು. ಇದೀಗ ಟ್ರೈಲರ್‌ ದೃಶ್ಯ ಕೂಡ ಲೀಕ್‌ ಆಗಿದೆ.

ಚಿತ್ರದ ನಿರ್ಮಾಣ ಸಂಸ್ಥೆಯವರು ಏನು ಮಾಡುತ್ತಿದ್ದಾರೆ? ಎಚ್ಚರಿಕೆ ವಹಿಸಬೇಕಲ್ಲವೇ? ಸಿನಿಮಾದ ಬಗ್ಗ ಜವಾಬ್ದಾರಿ ಇರಬೇಕಲ್ಲವೇ ಎಂಬ ಪ್ರಶ್ನೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಕೇಳುತ್ತಿದ್ದಾರೆ.  

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಕೂಡ ಒಂದಾಗಿದೆ.

ಇದನ್ನೂ ಓದಿ: 

‘ಸರ್ಕಾರು ವಾರಿ ಪಾಟ’ ಸಿನಿಮಾಕ್ಕೆ ಗೀತಾ ಗೋವಿಂದಂ ಖ್ಯಾತಿಯ ಪರಶುರಾಮ್‌ ಅವರ ಚಿತ್ರಕಥೆ, ನಿರ್ದೇಶನವಿದೆ. ಈ ಸಿನಿಮಾವನ್ನು ಮೈತ್ರಿ ಮೂಮಿ ಮೇಕರ್ಸ್‌ನವರು ನಿರ್ಮಾಣ ಮಾಡುತ್ತಿದ್ದಾರೆ. ಎಸ್ಎಸ್ ತಮನ್ ಸಂಗೀತ ನಿರ್ದೇಶನವಿದೆ. ಮಹೇಶ್‌ ಬಾಬುಗೆ ಜೋಡಿಯಾಗಿ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್‌ ನಟಿಸಿದ್ದಾರೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು