ಭಾನುವಾರ, ಮೇ 9, 2021
18 °C

ಪ್ರೇಮಿಗಳ ದಿನಕ್ಕೆ ‘ಟ್ರಾನ್ಸ್‌’ ‘ವರ್ಲ್ಡ್‌ ಫೇಮಸ್‌ ಲವರ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರ್ಜುನ್‌ ರೆಡ್ಡಿ ಮತ್ತು ಗೀತ ಗೋವಿಂದಂ ನಂತರ ಬಂದ ವಿಜಯ್‌ ಅಭಿನಯದ ಚಿತ್ರಗಳು ಹೇಳಿಕೊಳ್ಳುವಂತಹ ಯಶಸ್ಸು ಗಳಿಸಿಲ್ಲ.  ನಂತರದಲ್ಲಿ ಬಿಡುಗಡೆಯಾದ ನೋಟಾ, ಟ್ಯಾಕ್ಸಿವಾಲಾ, ಡಿಯರ್‌ ಕಾಮ್ರೇಡ್‌ ಸೋಲಿನಿಂದ ಹೊರಬರಲು ವಿಜಯ್‌ ದೇವರಕೊಂಡ ಹೆಣಗಾಡುತ್ತಿದ್ದಾರೆ.  

ಈ ಚಿತ್ರಕ್ಕಾಗಿ ಅವರು ಹೆಸರು ಕೂಡ ಬದಲಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ‘ದೇವರಕೊಂಡ ವಿಜಯ್ ಸಾಯಿ’ ಎಂದು ಹೆಸರು ಬದಲಾಯಿಸಲಾಗಿದೆ. ಹಿಂದಿನ ಸಿನಿಮಾಗಳ ಸೋಲು, ಹೆಸರು ಬದಲಾಗಲು ಕಾರಣ ಎನ್ನಲಾಗುತ್ತಿದೆ.

ವರ್ಲ್ಡ್‌ ಫೇಮಸ್‌ ಲವರ್‌ ದೇವರಕೊಂಡ ವೃತ್ತಿ ಜೀವನದ ಅತಿ ದೊಡ್ಡ ಚಿತ್ರ ಎಂದು ಹೇಳಲಾಗುತ್ತಿದೆ. ವೃತ್ತಿ ಜೀವನದ ಭವಿಷ್ಯ ನಿರ್ಧಾರ ಮಾಡಲಿರುವ ಈ ಚಿತ್ರದ ಯಶಸ್ಸು ಅತ್ಯಂತ ಮುಖ್ಯವಾಗಿದೆ. ಇದರಿಂದ ಅವರು ತೀವ್ರ ಒತ್ತಡದಲ್ಲಿ ಸಿಲುಕಿದ್ದಾರೆ. 

ಪ್ರೇಮಿಗಳ ದಿನದಂದು ಫೆಬ್ರುವರಿ 14ರಂದು  ‘ವರ್ಲ್ಡ್‌ ಫೇಮಸ್‌ ಲವರ್‌’ ತೆರೆ ಕಾಣಲಿದೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟೀಸರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ‘ಅರ್ಜುನ್ ರೆಡ್ಡಿ’ ಸಿನಿಮಾದ ದಟ್ಟ ಛಾಯೆ ಕಾಣುತ್ತಿದೆ. ವಿಜಯ್‌ ದೇವರಕೊಂಡ ಇನ್ನೂ ಆ ಚಿತ್ರದ ಹ್ಯಾಂಗೋವರ್‌ನಿಂದ ಹೊರಬಂದಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. 

ಈ ಚಿತ್ರದ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮೂಡಿಸಲು ದೇವರಕೊಂಡ ತಲೆ ಕೆಡಿಸಿಕೊಂಡಿದ್ದಾರೆ. ಅರ್ಜುನ್‌ ರೆಡ್ಡಿ ಹ್ಯಾಂಗೋವರ್‌ನಿಂದ ಹೊರಬಂದು ಹೊಸತನ ನೀಡುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆಯೇ ಎಂದು ಟಾಲಿವುಡ್‌ ಮಂದಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು