ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಛಪಾಕ್‌’ ಚಿತ್ರಕ್ಕೆ ಯು ಪ್ರಮಾಣಪತ್ರ

Last Updated 1 ಜನವರಿ 2020, 19:31 IST
ಅಕ್ಷರ ಗಾತ್ರ

ಆ್ಯಸಿಡ್‌ ದಾಳಿಗೊಳಗಾದ ಲಕ್ಷ್ಮೀ ಅಗರ್‌ವಾಲ್‌ ಜೀವನಕತೆಯಧಾರಿಸಿದ ಸಿನಿಮಾ‘ಛಪಾಕ್‌’. ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ನಟಿಸಿದ್ದು, ಈ ಚಿತ್ರದ ಟೀಸರ್‌, ಟ್ರೇಲರ್‌ಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿವೆ. ಈ ಚಿತ್ರ ಜನವರಿ 10ರಂದು ಬಿಡುಗಡೆಗೊಳ್ಳಲಿದ್ದು, ಸೆನ್ಸಾರ್‌ ಮಂಡಳಿಯಿಂದ ‘ಯು’ ಪ್ರಮಾಣಪತ್ರ ಪಡೆದಿದೆ.

ಚಿತ್ರದಲ್ಲಿ ಯಾವುದೇ ದೃಶ್ಯಗಳಿಗೆ ಆಕ್ಷೇಪ, ಕತ್ತರಿ ಹಾಕದೆ ಸೆನ್ಸರ್‌ ಮಂಡಳಿ ‘ಯು’ ಪ್ರಮಾಣಪತ್ರವನ್ನು ನೀಡಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

ಈ ಬಗ್ಗೆ ಸಂತೋಷ ಹಂಚಿಕೊಂಡಿರುವ ಚಿತ್ರದ ನಿರ್ದೇಶಕಿ ಮೇಘಾನ ಗುಲ್ಜಾರ್‌, ‘ಸಿನಿಮಾದಲ್ಲಿ ಲಕ್ಷ್ಮೀ ಕತೆಯನ್ನು ಸಿನಿಮಾ ರೂಪದಲ್ಲಿ ತೋರಿಸುವುದು ಸವಾಲಾಗಿತ್ತು. ತಂಡಕ್ಕೂ ಕಷ್ಟವಾಗಿತ್ತು. ಈಗ ಈ ಚಿತ್ರಕ್ಕೆ ‘ಯು’ ಪ್ರಮಾಣಪತ್ರ ನೀಡುವ ಮೂಲಕ ಸಿಬಿಎಫ್‌ಸಿ ಸಿನಿಮಾವನ್ನು ಎಲ್ಲರಿಗೂ ವೀಕ್ಷಿಸುವ ಹಾಗೂ ಉತ್ತಮ ಸಂದೇಶ ರವಾನಿಸುವ ಅವಕಾಶ ಕೊಟ್ಟಿದ್ದಾರೆ. ದೀಪಿಕಾ, ಲಕ್ಷಿ ಪಾತ್ರ ನಿಭಾಯಿಸಲು ಬಹಳ ಶ್ರಮಪಟ್ಟಿದ್ದಾರೆ. ಅವರು ಪಾತ್ರದೊಳಗೆ ಪರಾಕಾಯ ಪ್ರವೇಶ ಮಾಡಿದ್ದಾರೆ. ಇದಕ್ಕಾಗಿ ಚಿತ್ರತಂಡ ಬಹಳ ಶ್ರಮಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಈ ಹಿಂದೆ ಮೇಘಾನ, ಆಲಿಯಾಭಟ್‌ ಅಭಿನಯದ ‘ರಾಝಿ’ ಮತ್ತು ‘ತಲ್ವಾರ್‌’ ಚಿತ್ರವನ್ನು ನಿರ್ದೇಶಿಸಿದ್ದರು. ‘ಛಪಾಕ್‌’ ಸಿನಿಮಾದಲ್ಲಿಸಾಮಾಜಿಕ ಹೋರಾಟಗಾರನಾಗಿ ವಿಕ್ರಮ್‌ ಮಸ್ಸೆ ಹಾಗೂ ದೀಪಿಕಾ ಜೋಡಿಯಾಗಿ ಅಲೋಕ್‌ ದೀಕ್ಷಿತ್‌ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT