ಮಂಗಳವಾರ, ಜನವರಿ 28, 2020
17 °C

ಉಪ್ಪಿಯ ಹೊಸ ಲುಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಹೊಸ ಚಿತ್ರ ‘ಕಬ್ಜ’ದ ಪೋಸ್ಟರ್‌ಗಳು ಈಗ ಎಲ್ಲರ ಗಮನ ಸೆಳೆಯುತ್ತಿವೆ. ಗನ್‌ನಿಂದ ಫೈರ್ ಮಾಡುತ್ತಿರುವ ಮತ್ತು ಹೆಗಲಿಗೆ ರೈಫಲ್‌ ಏರಿಸಿಕೊಂಡಿರುವ ಹೊಸ ಲುಕ್‌ಗಳು ಅವರ ಅಭಿಮಾನಿಗಳಲ್ಲಿ ಪುಳಕ ಉಂಟು ಮಾಡಿವೆ. 

ಭೂಗತಲೋಕದ ಕಥೆ ಆಧರಿಸಿದ ಈ ಸಿನಿಮಾದಲ್ಲಿ ಉಪೇಂದ್ರ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ‌ ಸೇರಿ ಏಳು ಭಾಷೆಗಳಲ್ಲಿ ಸಿದ್ಧವಾಗಲಿದೆ. ಇದು ಉಪೇಂದ್ರ ಅವರ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ. ‘ಬ್ರಹ್ಮ’, ‘ಐಲವ್ ಯೂ’ ನಂತರ ನಿರ್ದೇಶಕ ಆರ್.ಚಂದ್ರು ಮತ್ತು ಉಪ್ಪಿ ಹ್ಯಾಟ್ರಿಕ್‌ ಸಾಧಿಸಲು ಸಜ್ಜಾಗಿದ್ದಾರೆ. ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೊದಲ್ಲಿ ಇತ್ತೀಚೆಗೆ ನಡೆದಿದ್ದು, ನಟ ಶಿವರಾಜ್‌ಕುಮಾರ್‌ ಚಿತ್ರದ ಮೊದಲ ದೃಶ್ಯಕ್ಕೆ ಚಾಲನೆ ನೀಡಿದ್ದರು. ಈ ಚಿತ್ರವನ್ನು ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್‌ ಅರ್ಪಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)