ತೆಲುಗು ನಟ ಪವನ್ ಕಲ್ಯಾಣ್ ಅಭಿನಯದ ‘ವಕೀಲ್ ಸಾಬ್'’ ಚಿತ್ರದ ಕೆಲ ದೃಶ್ಯದ ಫೋಟೊಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿವೆ.

ರಾಜಕಾರಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಪವನ್ ಕಲ್ಯಾಣ್ ಎರಡು ವರ್ಷಗಳ ನಂತರ ನಟಿಸುತ್ತಿರುವ ಚಿತ್ರವಿದು. ಹಾಗಾಗಿ ಈ ಲೀಕ್ ಆದ ಫೋಟೊಗಳು ಭಾರಿ ವೈರಲ್ ಆಗಿದ್ದು, ಅದನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

‘ವಕೀಲ್ ಸಾಬ್' ಚಿತ್ರವು ಹಿಂದಿಯಲ್ಲಿ ಅಮಿತಾಭ್ ಬಚ್ಚನ್, ತಾಪ್ಸಿ ಪನ್ನು ಅಭಿನಯದ ‘ಪಿಂಕ್’ಚಿತ್ರದ ತೆಲುಗು ರಿಮೇಕ್. ‘ಅಜ್ಞಾತವಾಸಿ’ ಸಿನಿಮಾ ಬಳಿಕ ಸಿನಿಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದ ಪವನ್ ಕಲ್ಯಾಣ್ ಈ ಚಿತ್ರದ ಮೂಲಕ ಟಾಲಿವುಡ್ಗೆ ಹಿಂತಿರುಗುವುದಾಗಿ ಘೋಷಿಸಿದ್ದರು. ಮೂಲ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ನಿರ್ವಹಿಸಿದ ಪಾತ್ರವನ್ನು ಈ ಚಿತ್ರದಲ್ಲಿ ಪವನ್ ಮಾಡುತ್ತಿದ್ದಾರೆ.

ಈಗ ಲೀಕ್ ಆಗಿರುವ ಚಿತ್ರದಲ್ಲಿ ಪವನ್ ಕಲ್ಯಾಣ್, ಕಪ್ಪು ಕೋಟು ತೊಟ್ಟು ಕೋರ್ಟ್ ಹಾಲ್ನಲ್ಲಿ ವಾದ ಮಂಡಿಸುತ್ತಿದ್ದು, ಅವರ ಜೊತೆ ಕ್ಲೈಂಟ್ ಸಾಲಿನಲ್ಲಿ ನಟಿ ಅಂಜಲಿ ಕುಳಿತಿರುವುದು ಕಾಣಿಸುತ್ತಿದೆ.

ಈ ಫೋಟೊವನ್ನು ನಟಿ ಅಂಜಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲಿಂದ ಆ ಫೋಟೊ ವೈರಲ್ ಆಗಿದೆ. ತಮ್ಮ ಒಪ್ಪಿಗೆ ಪಡೆಯದೇ ನಟಿ ಈ ಫೋಟೊವನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದಕ್ಕೆ ಚಿತ್ರತಂಡ ಅಸಮಾಧಾನ ವ್ಯಕ್ತಪಡಿಸಿತ್ತು. ಅಂಜಲಿ ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಫೋಟೊವನ್ನು ಡಿಲೀಟ್ ಮಾಡಿದ್ದರು.

‘ವಕೀಲ್ ಸಾಬ್’ ಚಿತ್ರದ ದೃಶ್ಯಗಳು ಲೀಕ್ ಆಗಿರುವುದು ಇದೇ ಮೊದಲೇನಲ್ಲ . ಕೆಲ ತಿಂಗಳ ಹಿಂದೆ, ದಿನಸಿ ಅಂಗಡಿ ಮುಂದೆ ನಿಂತು ಪವನ್ ಕಲ್ಯಾಣ್ ಯುವತಿಯೊಬ್ಬಳ ಜೊತೆ ಮಾತನಾಡುತ್ತಿರುವ ದೃಶ್ಯವೂ ಅಂತರ್ಜಾಲದಲ್ಲಿ ಹರಿದಾಡಿತ್ತು.

ಈ ಚಿತ್ರವನ್ನು ಬೋನಿಕಪೂರ್ ಹಾಗೂ ದಿಲ್ರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇದರಲ್ಲಿ ನಿವೇದಿತಾ ಥಾಮಸ್, ಅಂಜಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಂಸಿಎ ಖ್ಯಾತಿಯ ವೇಣು ಶ್ರೀರಾಮ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಮೇ15ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲಾಗಿದೆ.

‘ಪಿಂಕ್’ ಚಿತ್ರ ತಮಿಳಿನಲ್ಲಿ ‘ನೆರಕೊಂಡ ಪರವೈ’ ಎಂದು ರಿಮೇಕ್ ಆಗಿದ್ದು, ಅದರಲ್ಲಿ ನಟ ಅಜಿತ್, ನಟಿಯರಾದ ಶ್ರದ್ಧಾ ಶ್ರೀನಾಥ್, ಅಭಿರಾಮಿ ವೆಂಕಟಾಚಲಂ ಹಾಗೂ ಆ್ಯಂಡ್ರಿಯಾ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.