ಶನಿವಾರ, ಸೆಪ್ಟೆಂಬರ್ 18, 2021
24 °C

ಹಿರಿಯ ನಟ ಅನುಪಮ್ ಶ್ಯಾಮ್ ನಿಧನ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಹಿಂದಿ ಚಿತ್ರರಂಗದ ಹಿರಿಯ ನಟ ಅನುಪಮ್ ಶ್ಯಾಮ್, ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಕಿರುತೆರೆಯಲ್ಲಿ ಖ್ಯಾತಿ ಹೊಂದಿದ್ದ ಅನುಪಮ್ ಶ್ಯಾಮ್, ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ನಾಲ್ಕು ದಿನಗಳ ಹಿಂದೆ ಮುಂಬೈನ ಸಬ್ ಅರ್ಬನ್ ಗೋರೆಗಾಂವ್‌ನಲ್ಲಿ ಲೈಫ್ ಲೈನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಅವರ ಅಂತ್ಯಕ್ರಿಯೆಯು ಸೋಮವಾರ ಸಂಜೆ ನೆರವೇರಲಿದೆ.

ಇದನ್ನೂ ಓದಿ: 

'ಸ್ಲಮ್‌ಡಾಗ್ ಮಿಲಿಯನೇರ್', 'ಬಂಡಿತ್ ಕ್ವೀನ್' ಚಿತ್ರಗಳಲ್ಲಿ ನಟಿಸಿರುವ ಅನುಪಮ್ ಶ್ಯಾಮ್ 'ಮನ್ ಕೀ ಅವಾಜ್: ಪ್ರತಿಜ್ಞಾ' ಟಿವಿ ಶೋದಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿದ್ದರು.

 

 

 

ಸುಮಾರು ಮೂರು ದಶಕಗಳ ವೃತ್ತಿಜೀವನದಲ್ಲಿ 'ಸತ್ಯ', 'ದಿಲ್ ಸೇ', 'ಲಗಾನ್' ಮುಂತಾದ ಸಿನಿಮಾ ಮತ್ತು ಮನ್ ಕೀ ಅವಾಜ್ ಪ್ರತಿಜ್ಞಾದಲ್ಲಿ ತಮ್ಮ ಪಾತ್ರಕ್ಕಾಗಿ ಅನುಪಮ್ ಶ್ಯಾಮ್ ಮೆಚ್ಚುಗೆ ಗಳಿಸಿದ್ದರು. ಇದು 2009ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗಿತ್ತು. ಇತ್ತೀಚಿಗೆ ಇದರ ಎರಡನೇ ಆವೃತ್ತಿಗಾಗಿ ಶೂಟಿಂಗ್ ಪ್ರಾರಂಭಿಸಿದ್ದರು.

 

ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅನುಪಮ್ ಶ್ಯಾಮ್, ಕಳೆದ ವರ್ಷ ಡಯಾಲಿಸಿಸ್‌ಗೆ ಒಳಗಾಗಿದ್ದರು. ಅಲ್ಲದೆ ಅವರ ಚಿಕಿತ್ಸೆಗಾಗಿ ಚಿತ್ರರಂಗದ ನೆರವನ್ನು ಕೋರಲಾಗಿತ್ತು.

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು