ಶನಿವಾರ, ಜುಲೈ 31, 2021
27 °C

ಬಾಲಿವುಡ್ ಗೀತೆ ರಚನೆಕಾರ ಅನ್ವರ್ ಸಾಗರ್ ನಿಧನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Anwar Sagar

ಮುಂಬೈ: ಬಾಲಿವುಡ್‌ನ ಖ್ಯಾತ ಗೀತೆ ರಚನೆಕಾರ ಅನ್ವರ್ ಸಾಗರ್ (70) ಬುಧವಾರ ನಿಧನರಾದರು.

ಅವರನ್ನು ಕೋಕಿಲಾಬೆನ್‌ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಮಧ್ಯಾಹ್ನ ಕರೆತರಲಾಗಿತ್ತು. ಅಷ್ಟರಲ್ಲಿ ಅವರು ಇಹಲೋಕ ತ್ಯಜಿಸಿದ್ದರು ಎಂದು ಆಸ್ಪತ್ರೆ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಮೂಲಗಳು ಹೇಳಿವೆ.

ಅಕ್ಷಯ್ ಕುಮಾರ್, ಆಯೆಷಾ ಝುಲ್ಕಾ ನಟನೆಯ ‘ಖಿಲಾಡಿ’ ಚಿತ್ರದ ‘ವಾದಾ ರಹಾ ಸನಮ್’ ಹಾಡಿನ ಮೂಲಕ ಪ್ರಸಿದ್ಧರಾಗಿದ್ದರು.

80, 90ರ ದಶಕದ ಸಿನಿಮಾಗಳಿಗೆ ಅನ್ವರ್ ಅವರು ಹಾಡುಗಳನ್ನು ರಚಿಸಿದ್ದರು. ‘ಯರಾನಾ’, ‘ಸಪ್‌ನೇ ಸಾಜನ್ ಕೇ’, ‘ಖಿಲಾಡಿ’ ಸೇರಿದಂತೆ ಅನೇಕ ಸಿನಿಮಾಗಳಿಗೆ ಪದ್ಯ ರಚಿಸಿದ್ದರು.

ಇನ್ನಷ್ಟು...

ತಾಯಿ ಅಗಲಿಕೆಯ ಬೆನ್ನಲ್ಲೇ ಇಹಲೋಕ ತ್ಯಜಿಸಿದ ನಟ ಇರ್ಫಾನ್ ಖಾನ್

ಬಾಲಿವುಡ್ ನಟ ರಿಷಿ ಕಪೂರ್ ನಿಧನ

ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು