ಸೋಮವಾರ, ಆಗಸ್ಟ್ 8, 2022
23 °C

ಥೈಲ್ಯಾಂಡ್‌ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಮತ್ತೊಂದು ಫೋಟೊ ವೈರಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಇತ್ತೀಚೆಗಷ್ಟೇ ಮದುವೆಯಾದ ಬಹುಭಾಷಾ ನಟಿ ನಯನತಾರಾ –ವಿಘ್ನೇಶ್ ಶಿವನ್ ಜೋಡಿ ಹನಿಮೂನ್‌ಗಾಗಿ ಥೈಲ್ಯಾಂಡ್‌ಗೆ ತೆರಳಿದ್ದಾರೆ. 

ಇದೀಗ ನಯನತಾರಾ ಜೊತೆಗಿನ ಹೊಸ ಫೋಟೊವೊಂದನ್ನು ನಿರ್ದೇಶಕ ವಿಘ್ನೇಶ್, ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಆಕೆ ನನ್ನ ಫೋಟೊ ಕ್ಲಿಕ್ ಮಾಡಿದಾಗ ನಾನು ಆಕೆಯ ಫೋಟೊವನ್ನು ಕ್ಲಿಕ್ಕಿಸಿದೆ’ ಎಂದು ಬರೆದುಕೊಂಡಿದ್ದಾರೆ. 

ನಯನತಾರಾ ಬಿಳಿ ಬಣ್ಣದ ಟಾಪ್ ಮತ್ತು ನೀಲಿ ಜೀನ್ಸ್‌ ಧರಿಸಿದ್ದು, ಮೊಬೈಲ್‌ನಲ್ಲಿ ಫೋಟೊ ಕ್ಲಿಕ್ಕಿಸುತ್ತಿರುವ ದೃಶ್ಯ ಫೋಟೊದಲ್ಲಿ ಸೆರೆಯಾಗಿದೆ. 

ಸದ್ಯ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತ‍ಪಡಿಸಿದ್ದಾರೆ. 

‘ಸೂಪರ್‌ ಜೋಡಿ’ ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಹೃದಯದ ಎಮೋಜಿಗಳನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಹಾಕಿದ್ದಾರೆ.

ಜೂನ್ 9ರಂದು ನಯನತಾರಾ –ವಿಘ್ನೇಶ್ ಶಿವನ್ ಚೆನ್ನೈನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಮದುವೆಯಾಗಿದ್ದರು. 

ಸದ್ಯ ನಯನತಾರಾ, ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ‘ಗಾಡ್ ಫಾದರ್’, ಪೃಥ್ವಿರಾಜ್ ಸುಕುಮಾರನ್ ಜೊತೆ ‘ಗೋಲ್ಡ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇವನ್ನೂ ಓದಿ... 

ನಟಿ ರಾಕುಲ್ ಪ್ರೀತ್ ಸಖತ್ ಡ್ಯಾನ್ಸ್: ಗೆಳೆಯ ಬಗ್‌ನಾನಿ ಪ್ರತಿಕ್ರಿಯೆ ಹೀಗಿತ್ತು?

ಕೋಸ್ಟರಿಕಾ ಪ್ರವಾಸದಲ್ಲಿ ಸೂರ್ಯ –ಜ್ಯೋತಿಕಾ ದಂಪತಿ: ವಿಡಿಯೊ ವೈರಲ್

ಅಪ್ಪನಾದ ವಿನಯ್ ಕುಮಾರ್; ಹೆಣ್ಣು ಮಗುವಿಗೆ ಜನ್ಮ ನೀಡಿದ ರಿಚಾ ಸಿಂಗ್ 

ಶರದ್ ಪವಾರ್‌ಗೆ ಅವಹೇಳನ ಮಾಡಿದ್ದ ಮರಾಠಿ ನಟಿ ಕೇತಕಿ ಚಿತಳೆ ಜೈಲಿನಿಂದ ಬಿಡುಗಡೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು