‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ತೆರೆಯ ಮೇಲೆ ಮೋಡಿ ಮಾಡಿರುವ ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾ ‘ವರ್ಲ್ಡ್ ಫೇಮಸ್ ಲವರ್’.
ಕ್ರಾಂತಿ ಮಾಧವ್ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅಭಿನಯಿಸುವುದಾಗಿ ಮೊದಲೇ ಪ್ರಕಟಿಸಿದ್ದರು. ಆದರೆ ಸಿನಿಮಾದ ಟೈಟಲ್ ಬಗ್ಗೆ ಈ ತಂಡ ಈಗಷ್ಟೇ ನಿರ್ಧಾರ ಮಾಡಿದೆ.
ತಮ್ಮ ಒಂಬತ್ತನೇ ಸಿನಿಮಾದಲ್ಲಿ ರಾಶಿ ಖನ್ನಾ ಅವರೊಂದಿಗೆ ವಿಜಯ್ ಮೊದಲ ಬಾರಿಗೆ ನಟಿಸಲಿದ್ದಾರೆ. ಕ್ಯಾಥರಿನ್ ತ್ರೆಸಾ, ಐಶ್ವರ್ಯಾ ರಾಜೇಶ್, ಇಸಬೆಲ್ಲಾ ಲೈಟ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ಕೆ.ಎ.ವಲ್ಲಭ ಅವರ ನಿರ್ಮಾಣದಲ್ಲಿ ಸಿನಿಮಾ ಸೆಟ್ಟೇರಲಿದೆ. ಕೊಚ್ಚಿಯಲ್ಲಿ ಇತ್ತೀಚೆಗೆ ಸಿನಿಮಾ ಕುರಿತು ಅಂತಿಮ ಸುತ್ತಿನ ಮಾತುಕತೆ ನಡೆದಿದೆ. ಈ ಕುರಿತು ವಿಜಯ್ ದೇವರಕೊಂಡ ಅವರು ಟ್ವೀಟ್ ಮಾಡಿದ್ದಾರೆ.
‘ವರ್ಲ್ಡ್ ಫೇಮಸ್ ಲವ್ ಸ್ಟೋರಿ’ಯ ಮೂಲಕ ನಿಮ್ಮ ಮುಂದೆ ಬರಲಿದ್ದೇವೆ. ಖಂಡಿತಾ ನಿಮ್ಮೆಲ್ಲರ ಮನಸ್ಸು ಗೆಲ್ಲುತ್ತೇವೆ’ ಎಂದು ಟ್ವಿಟರ್‌ನಲ್ಲಿ ಬರೆದಿದ್ದಾರೆ.
ನಟಿಯರಾದ ಐಶ್ವರ್ಯಾ, ರಾಶಿ ಕೂಡ ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಸಿನಿಮಾದ ಮೊದಲ ಲುಕ್ ಬಿಡುಗಡೆಯಾಗಲಿದೆ ಕಾಯುತ್ತಿರಿ ಎಂದು ಸಿನಿ ತಂಡ ಹೇಳಿದೆ.