ನಟ ವಿಜಯ ರಾಘವೇಂದ್ರ ಸಿನಿಬ್ಯಾಂಕ್ ವರ್ಷ ಉರುಳಿದಂತೆ ಹಿಗ್ಗುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆ ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’. 2021ರಲ್ಲಿ ತೆರೆಕಂಡ ವಿಜಯ ರಾಘವೇಂದ್ರ ನಟನೆಯ ‘ಸೀತಾರಾಮ್ ಬಿನೋಯ್’ ಸಿನಿಮಾ ಸೀಕ್ವೆಲ್ ಇದಾಗಿದೆ.

ತಮ್ಮ 50ನೇ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದ ವಿಜಯ ರಾಘವೇಂದ್ರ ಬಳಿಕ ‘ಸೀತಾರಾಮ್ ಬಿನೋಯ್’ ನಿರ್ದೇಶಿಸಿದ್ದ ದೇವಿಪ್ರಸಾದ್ ಶೆಟ್ಟಿ ಅವರೇ ಆ್ಯಕ್ಷನ್ ಕಟ್ ಹೇಳಿದ್ದ ‘ಕೇಸ್ ಆಫ್ ಕೊಂಡಾಣ’ದಲ್ಲಿ ನಟಿಸಿದ್ದರು. ಇದೀಗ ದೇವಿ ಪ್ರಸಾದ್ ಶೆಟ್ಟಿ ಅವರೇ ನಿರ್ದೇಶಿಸುತ್ತಿರುವ ಇನ್ನೊಂದು ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಮತ್ತೊಂದು ಪ್ರಕರಣ ಕೈಗೆತ್ತಿಕೊಂಡಿದ್ದಾರೆ. ದೇವಿಪ್ರಸಾದ್ ಅವರೇ ಈ ಸಿನಿಮಾದ ಕಥೆ ಬರೆದಿದ್ದು, ಸಾತ್ವಿಕ್ ಹೆಬ್ಬಾರ್ ಜೊತೆ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ. ಅರವಿಂದ್ ಶೆಟ್ಟಿ ಸಹ ನಿರ್ಮಾಪಕರಾಗಿದ್ದಾರೆ.

ಇತ್ತೀಚೆಗಷ್ಟೇ ‘ರಿಪ್ಪನ್ ಸ್ವಾಮಿ’ಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದ ವಿಜಯ ರಾಘವೇಂದ್ರ ನಟೇಶ್ ಹೆಗಡೆ ಮತ್ತು ಗಣೇಶ್ ಹೆಗಡೆ ನಿರ್ದೇಶನದ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ನಾಲ್ಕೈದು ಪ್ರಾಜೆಕ್ಟ್ಗಳು ಅವರ ಕೈಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.