ಸೋಮವಾರ, ಡಿಸೆಂಬರ್ 5, 2022
24 °C

ವಿಕ್ರಂ ವೇದ ಮೂಲಕ್ಕಿಂತ ಸಂಪೂರ್ಣ ಭಿನ್ನ: ಪುಷ್ಕರ್‌–ಗಾಯಿತ್ರಿ

ಪ್ರಜಾವಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮಾಧವನ್‌ ಮತ್ತು ವಿಜಯ್‌ ಸೇತುಪತಿ ಅಭಿನಯದ ಸೂಪರ್‌ಹಿಟ್‌ ಚಿತ್ರ ವಿಕ್ರಂ ವೇದ ಹಿಂದಿಯ ರೀಮೇಕ್‌ ಆವೃತ್ತಿ ಬಿಡುಗಡೆ ಸಿದ್ಧವಾಗಿದೆ. ಹೃತಿಕ್‌ ರೋಷನ್‌–ಸೈಫ್‌ ಅಲಿ ಖಾನ್‌ ನಟನೆಯ ಚಿತ್ರದ ಕುರಿತು ದೊಡ್ಡ ಮಟ್ಟದ ನಿರೀಕ್ಷೆ ಆರಂಭಗೊಂಡಿದೆ. ಆದಾಗ್ಯೂ ಇದು ತಮಿಳಿನ ವಿಕ್ರಂ ವೇದದ ಸಂಪೂರ್ಣ ರೀಮೇಕ್‌ ಅಲ್ಲ. ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಚಿತ್ರದ ನಿರ್ದೇಶಕರಾದ ಪುಷ್ಕರ್‌ ಮತ್ತು ಗಾಯಿತ್ರಿ ಹೇಳಿದ್ದಾರೆ.

ತಮಿಳು ಚಿತ್ರದ ಮರುಸೃಷ್ಟಿಯಲ್ಲ. ಬದಲಿಗೆ ಆ ಕಥೆಯನ್ನು ಬೇರೆ ರೀತಿಯಲ್ಲಿ ಬಳಸಿಕೊಂಡಿದ್ದೇವೆ. ದೃಶ್ಯಗಳ ತಿರುಳು ಅದೇ ಇರುತ್ತದೆ. ಆದರೆ ಚಿತ್ರಿಸಿದ ರೀತಿ ಬೇರೆಯಾಗಿದೆ. ಹೃತಿಕ್‌ ಹಾಗೂ ಸೈಫ್‌ ಪಾತ್ರಕ್ಕೆ ತಕ್ಕಂತೆ ಕಥೆಯನ್ನು ಬದಲಿಸಿಕೊಳ್ಳಲಾಗಿದೆ ಎಂದು ಚಿತ್ರದ ಪ್ರಚಾರದ ವೇಳೆ ಗಾಯಿತ್ರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪುಷ್ಕರ್‌ ಮತ್ತು ಗಾಯಿತ್ರಿ ದಂಪತಿ ನಿರ್ದೇಶನದ ಚಿತ್ರದಲ್ಲಿ ಹೃತಿಕ್‌ ರೋಷನ್‌ ಗ್ಯಾಂಗ್‌ಸ್ಟರ್‌ ವೇದ ಪಾತ್ರ ಮಾಡುತ್ತಿದ್ದಾರೆ. ಚಿತ್ರ ಸೆ.30ರಂದು ತೆರೆಗೆ ಬರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು