ಬುಧವಾರ, ಆಗಸ್ಟ್ 4, 2021
20 °C

ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

wajid khan

ಮುಂಬೈ: ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ (42) ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ತನ್ನ ಸಹೋದರ ಸಾಜಿದ್ ಜತೆ ಸೇರಿ ಹಲವಾರು ಸಿನಿಮಾಗಳಿಗೆ ಸಂಗೀತ ನಿರ್ದೇಶಿಸಿದ್ದ ಇವರು ಸಾಜಿದ್- ವಾಜಿದ್ ಜೋಡಿ ಎಂದೇ ಖ್ಯಾತರಾಗಿದ್ದರು.

ವಾಜಿದ್ ಅವರ ಸಾವಿನ ಸುದ್ದಿಯನ್ನು ಗಾಯಕ ಸೋನು ನಿಗಮ್ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

 
 
 
 

 
 
 
 
 
 
 
 
 

My Brother Wajid left us.

A post shared by Sonu Nigam (@sonunigamofficial) on

ಅವರಿಗೆ ಹಲವಾರು ಆರೋಗ್ಯ ಸಮಸ್ಯೆ ಇತ್ತು. ಕಿಡ್ನಿ ಸಮಸ್ಯೆ ಇದ್ದು, ಕಿಡ್ನಿ ಕಸಿ ನಡೆದಿತ್ತು, ಇತ್ತೀಚೆಗೆ ಅವರಿಗೆ ಕಿಡ್ನಿ ಸೋಂಕು ಕೂಡಾ ತಗುಲಿತ್ತು. ಕಳೆದ ನಾಲ್ಕು ದಿನಗಳಿಂದ ಅವರು ವೆಂಟಿಲೇಟರ್‌ನಲ್ಲಿದ್ದು, ಆರೋಗ್ಯ ಗಂಭೀರವಾಗಿತ್ತು. ಕಿಡ್ನಿ ಸೋಂಕು ತಗುಲಿ ಅದು ಮತ್ತಷ್ಟು ಉಲ್ಬಣವಾಗಿತ್ತು ಎಂದು ಸಂಗೀತ ನಿರ್ದೇಶಕ ಸಲೀಂ ಮರ್ಚೆಂಟ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ವಾಜಿದ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ಸೋನು ನಿಗಮ್ ಹೇಳಿದ್ದಾರೆ ಎಂದು ಸಿನಿಮಾ ಪತ್ರಕರ್ತ ಫರಿದೂನ್ ಶಹರ್ಯಾರ್ ಟ್ವೀಟಿಸಿದ್ದಾರೆ.
ದುಃಖದ ಸುದ್ದಿ,  ಸಾಜಿದ್- ವಾಜಿದ್ ಜೋಡಿಯ ಸಂಗೀತ ನಿರ್ದೇಶಕ ವಾಜಿದ್ ಇನ್ನಿಲ್ಲ ಎಂದು ಗಾಯಕ ಸೋನು ನಿಗಮ್ ಹೇಳಿದ್ದಾರೆ. ಅವರಿಗೆ ಕೋವಿಡ್-19 ರೋಗ ಇತ್ತು ಎಂದಿದ್ದಾರೆ ಫರಿದೂನ್.

ತಬಲಾ ವಾದಕ ಉಸ್ತಾದ್ ಶರಾಫತ್ ಅಲಿ ಖಾನ್ ಅವರ ಪುತ್ರ ಸಾಜಿದ್, ಸೂಫಿ ಮತ್ತು ಬಾಲಿವುಡ್ ಸಂಗೀತದಲ್ಲಿ ನಿಪುಣರಾಗಿದ್ದರು.

1998ರಲ್ಲಿ ಸಲ್ಮಾನ್ ಖಾನ್ ನಟನೆಯ 'ಪ್ಯಾರ್ ಕೀಯಾ ತೋ ಡರ್‌ನಾ ಕ್ಯಾ' ಎಂಬ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದರು. ದಬಾಂಗ್, ಚೋರಿ ಚೋರಿ, ಹಲೋ ಬ್ರದರ್, ವಾಂಟೆಡ್, ಮುಜ್‌ಸೇ ಶಾದೀ ಕರೋಗಿ ಮೊದಲಾದ ಸಿನಿಮಾಗಳಿಗೆ  ಇವರು ಸಂಗೀತ ನೀಡಿದ್ದಾರೆ. ವಾಜಿದ್ ಖಾನ್  ಉತ್ತಮ ಗಾಯಕರೂ ಆಗಿದ್ದರು. ಸಲ್ಮಾನ್ ಖಾನ್ ಅವರ ಬಹುತೇಕ ಸಿನಿಮಾಗಳಲ್ಲಿ ವಾಜಿದ್ ಖಾನ್ ಹಾಡಿದ್ದಾರೆ. ದಬಾಂಗ್ ಚಿತ್ರದ  ಹುಡ್ ಹುಡ್ ದಬಂಗ್, ಜಲ್ವಾ ಮತ್ತು ಫೆಲಿಕೋಲ್ ಸೇ ಹಾಡು ಹಾಡಿದ್ದು ಇವರೇ.

2012ರಲ್ಲಿ ಸಾಜಿದ್-ವಾಜಿದ್ ಜೋಡಿ ಸರಿಗಮಪ ಮತ್ತು ಸರಿಗಮಪ ಸಿಂಗಿಂಗ್ ಸೂಪರ್ ಸ್ಟಾರ್ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದರು. ಐಪಿಎಲ್4ರ ಥೀಮ್ ಸಾಂಗ್  ಧೂಮ್ ಧೂಮ್ ಧೂಮ್ ಧಡಕ್ ಸಂಗೀತ ನಿರ್ದೇಶಿಸಿದ್ದು ಇದೇ ಸಾಜಿದ್-ವಾಜಿದ್ ಜೋಡಿ.

ವಾಜಿದ್ ನಿಧನಕ್ಕೆ ಸಂತಾಪ ಸೂಚಿಸಿ ಸಿನಿಮಾರಂಗದ ಕಲಾವಿದರು ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು