ಸೋಮವಾರ, ಜುಲೈ 4, 2022
21 °C

ಬರಲಿದೆ ಹೃತಿಕ್ ರೋಷನ್ ನಟನೆಯ ವಾರ್‌ ಸಿನಿಮಾದ ಸೀಕ್ವೆಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೃತಿಕ್‌ ರೋಷನ್‌ ಹಾಗೂ ಟೈಗರ್‌ ಶ್ರಾಫ್‌ ಅಭಿನಯದ ‘ವಾರ್‌’ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ₹ 52 ಕೋಟಿ ಕಲೆಕ್ಷನ್‌ ಮಾಡಿತ್ತು. ಐದು ದಿನಗಳಲ್ಲಿ ₹150 ಕೋಟಿಗಿಂತಲೂ ಹೆಚ್ಚು ಗಳಿಕೆ ಮಾಡಿತ್ತು.  ಸಿನಿಮಾದಲ್ಲಿ ಹೃತಿಕ್‌ ಹಾಗೂ ಟೈಗರ್‌ ಶ್ರಾಫ್‌ ಅಭಿನಯಕ್ಕೆ ಎಲ್ಲಾ ಕಡೆಗಳಿಂದ ಪ್ರಶಂಸೆಯೂ ಲಭಿಸಿದೆ.

ಈಗ ಈ ಚಿತ್ರದ ಸೀಕ್ವೆಲ್‌ ಬಗ್ಗೆ ಸುದ್ದಿಯಾಗುತ್ತಿದೆ. ಟೈಗರ್‌ ಶ್ರಾಫ್‌ ಹಾಗೂ ಹೃತಿಕ್‌ ‘ವಾರ್‌ 2’ ಸಿನಿಮಾದಲ್ಲಿ ನಟಿಸುವ ಉತ್ಸಾಹವನ್ನು ತೋರಿಸಿದ್ದಾರೆ. ‘ಚಿತ್ರ ಬಿಡುಗಡೆಯಾಗಿ ವಾರವಾಗಿದೆಯಷ್ಟೇ, ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ನೋಡಿ ಈ ಸಿನಿಮಾದ ಅವತರಣಿಕೆ ಬಗ್ಗೆ ನಿರ್ಧಾರ ಮಾಡಲಾಗುವುದು. ವಾರ್‌ 2 ಸಿನಿಮಾ ಮುಂದಿನ ದಿನಗಳಲ್ಲಿ ಖಂಡಿತ ಬರಲಿದೆ’ ಎಂದು ಶ್ರಾಫ್‌ ಸಂದರ್ಶನದಲ್ಲಿ ಹೇಳಿದ್ದಾರೆ.

‘ವಾರ್‌ 2’ ಪ್ರೇಕ್ಷಕರ ತೀರ್ಮಾನವನ್ನು ಅವಲಂಭಿಸಿರುತ್ತದೆ. ನಮ್ಮನ್ನು ಮತ್ತೊಮ್ಮೆ ತೆರೆ ಮೇಲೆ ನೋಡಲು ಪ್ರೇಕ್ಷಕರು ಇಷ್ಟಪಟ್ಟರೆ ನಾವು ನಟಿಸಲು ಸಿದ್ಧ’ ಎಂದು ಹೃತಿಕ್‌ ಹೇಳಿದ್ದಾರೆ. ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಈ ಚಿತ್ರವು ಬಿಡುಗಡೆಯಾದ ಒಂದೇ ದಿನದಲ್ಲಿ ಹಲವು ದಾಖಲೆಗಳನ್ನು ಬರೆದಿದೆ.

ಇದನ್ನೂ ಓದಿ: ಹೃತಿಕ್ ರೋಷನ್ ಪ್ರಪಂಚದ ಅತಿ ಸುಂದರ ವ್ಯಕ್ತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು