ಗುರುವಾರ , ಮೇ 19, 2022
25 °C

ಆಲಿಯಾ, ರಣಬೀರ್‌ಗೆ ನಟಿ ದೀಪಿಕಾ ಪಡುಕೋಣೆ ಕೊಟ್ಟ ಉಡುಗೊರೆ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನ ನವದಂಪತಿ ಆಲಿಯಾ ಭಟ್‌ ಮತ್ತು ರಣಬೀರ್ ಕಪೂರ್ ಅವರಿಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಅವರು ದುಬಾರಿ ಬೆಲೆಯ ಉಡುಗೋರೆ ನೀಡಿದ್ದಾರೆ.

ಆಲಿಯಾ ಮತ್ತು ರಣಬೀರ್‌ಗೆ ದೀಪಿಕಾ ₹ 15 ಲಕ್ಷ ಮೌಲ್ಯದ ಎರಡು ವಾಚ್‌ಗಳನ್ನು ಉಡುಗೋರೆ ನೀಡಿದ್ದಾರೆ. ಇನ್ನು ರಣವೀರ್‌ ಸಿಂಗ್‌ ಅವರು ₹ 80 ಲಕ್ಷ ಮೌಲ್ಯದ ಬೈಕ್‌ ಅನ್ನು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಆಲಿಯಾ, ರಣಬೀರ್‌ ಮದುವೆ ಕಾರ್ಯಕ್ರಮವನ್ನು ಪ್ರಚಾರ ಮಾಡಿದ್ದ ಮಾಧ್ಯಮಗಳು ಇದೀಗ ಮದುವೆಗೆ ಬಂದ ಗಿಫ್ಟ್‌ಗಳ ಬಗ್ಗೆಯೂ ವರದಿ ಮಾಡುತ್ತಿವೆ.

ಕರೀನಾ ಕಪೂರ್‌, ಪ್ರಿಯಾಂಕಾ ಚೋಪ್ರಾ ಅವರು ಆಲಿಯಾಗೆ ಡೈಮಂಡ್‌ ನಕ್ಲೇಸ್‌ ನೀಡಿದ್ದಾರೆ ಎಂದು ವರದಿಯಾಗಿದೆ.

ಓದಿ... ಕೆಜಿಎಫ್ ಚಾಪ್ಟರ್-2: ಕೇವಲ 2 ದಿನದ ಕಲೆಕ್ಷನ್ ಕೇಳಿ ದಂಗಾದ ಚಿತ್ರರಂಗ!

ಅದ್ದೂರಿಯಾಗಿ ನಡೆದ  ಮದುವೆ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರಷ್ಟೇ ಭಾಗವಹಿಸಿದ್ದರು. 

ನೀತು ಕಪೂರ್, ಕರೀನಾ ಕಪೂರ್, ಮಹೇಶ್ ಭಟ್, ಸೋನಿ ರಜ್ದಾನ್, ಕರಿಷ್ಮಾ ಕಪೂರ್, ಕರಣ್ ಜೋಹರ್, ಅಯಾನ್ ಮುಖರ್ಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಓದಿ... ಚೆನ್ನೈನಲ್ಲಿ ಕನ್ನಡದಲ್ಲೇ ಕೆಜಿಎಫ್ ಸಿನಿಮಾ ವೀಕ್ಷಿಸಿದ ರಜನಿಕಾಂತ್: ಹೇಳಿದ್ದೇನು? 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು