ಶನಿವಾರ, ಮಾರ್ಚ್ 6, 2021
28 °C

ತೆರೆ ಮೇಲೆ ಬರಲಿದೆಯೇ ಸುಮಲತಾ ಅಂಬರೀಷ್ ಜೀವನಚರಿತ್ರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿರ್ದೇಶಕ ಗುರು ದೇಶಪಾಂಡೆ ಖ್ಯಾತ ಬಹುಭಾಷಾ ತಾರೆ, ಸಂಸದೆ ಸುಮಲತಾ ಅಂಬರೀಷ್ ಅವರ ಜೀವನಕಥೆಯನ್ನ ತೆರೆ ಮೇಲೆ ತರಲು ಯೋಚಿಸಿದ್ದಾರೆ ಎಂಬ ಸುದ್ದಿಯೊಂದು ಚಂದನವನದ ಅಂಗಳದಲ್ಲಿ ಹರಿದಾಡುತ್ತಿದೆ. ಇದರಲ್ಲಿ ಸುಮಲತಾ ಅವರ ವೈಯಕ್ತಿಕ ಜೀವನ, ನಟನೆ ಹಾಗೂ ರಾಜಕೀಯ ಅಂಶಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ ಎನ್ನಲಾಗುತ್ತಿದೆ. ಇತ್ತೀಚೆಗೆ ಗುರು ಸುಮಲತಾ ಅವರನ್ನು ಭೇಟಿ ಮಾಡಿದ್ದರು. ಅವರ ಭೇಟಿಯಿಂದ ಈ ಸುದ್ದಿಗೆ ಇನ್ನಷ್ಟು ಪುಷ್ಠಿ ಸಿಕ್ಕಂತಾಗಿದೆ. ಆಂಗ್ಲಪತ್ರಿಕೆಯೊಂದರ ಪ್ರಕಾರ ಗುರು ಸುಮಲತಾ ಜೀವನಚರಿತ್ರೆಯನ್ನು 10 ರಿಂದ 15 ಎಪಿಸೋಡ್‌ಗಳ ವೆಬ್‌ಸರಣಿ ರೂಪದಲ್ಲಿ ತೆರೆ ಮೇಲೆ ತರುತ್ತಾರಂತೆ.

ಮೂಲಗಳ ಪ್ರಕಾರ 2019ರ ಚುನಾವಣೆಯ ಹಿನ್ನೋಟವನ್ನು ಇದರಲ್ಲಿ ತೋರಿಸಲಾಗುತ್ತದೆ ಎನ್ನಲಾಗುತ್ತಿದೆ. ಈ ಚುನಾವಣೆಯ ಸುಮಲತಾ ಅವರ ರಾಜಕೀಯ ಬದುಕಿಗೆ ದೊಡ್ಡ ತಿರುವು ನೀಡಿತ್ತು. ಆದರೆ ಈ ಪ್ರಾಜೆಕ್ಟ್‌ನ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ರೆಬಲ್‌ಸ್ಟಾರ್‌ ಅಂಬರೀಶ್ ಅವರ 2ನೇ ವರ್ಷದ ಪುಣ್ಯತಿಥಿಯಂದು ಅವರನ್ನು ನೆನಪಿಸಿಕೊಂಡು ಅವರೊಂದಿಗಿನ ತಮ್ಮ ನೆಚ್ಚಿನ ಫೋಟೊವನ್ನು ಹಂಚಿಕೊಂಡಿದ್ದ ಸುಮಲತಾ ಭಾವನಾತ್ಮಕ ನುಡಿಗಳನ್ನು ಬರೆದುಕೊಂಡಿದ್ದರು. ತಮ್ಮ ದೀರ್ಘ ಬರಹದಲ್ಲಿ ಅಂಬರೀಶ್‌ ಸದಾ ನನ್ನೊಂದಿಗೇ ಇರುತ್ತಾರೆ ಎಂದಿದ್ದರು. ಅಂದು ಕಂಠೀರವ ಸ್ಟುಡಿಯೊದಲ್ಲಿರುವ ಅಂಬಿ ಸಮಾಧಿ ಬಳಿ ತೆರಳಿ ನಮನ ಸಲ್ಲಿದ್ದರು. ಆಗ ಸುಮಲತಾ ಅವರೊಂದಿಗೆ ಮಗ ಅಭಿಷೇಕ್ ಹಾಗೂ ನಟ ದರ್ಶನ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು