ಸೋಮವಾರ, ಅಕ್ಟೋಬರ್ 26, 2020
28 °C

ಹೇಗಿರಬಹುದು ‘ವಿಂಡೋಸೀಟ್’ ಫಸ್ಟ್ ಲುಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶೀತಲ್‌ ಶೆಟ್ಟಿ ‌ಚೊಚ್ಚಲ ನಿರ್ದೇಶನದ ‘ವಿಂಡೋಸೀಟ್’ ಚಿತ್ರದ ಫಸ್ಟ್ ಲುಕ್ ಸೆ.24ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ. ‘ವಿಂಡೋಸೀಟ್’‌ ಫಸ್ಟ್‌ಲುಕ್‌ ಹೇಗಿರಬಹುದು ಎನ್ನುವ ಕುತೂಹಲವೂ ಸಿನಿರಸಿಕರಲ್ಲಿ ಮನೆಮಾಡಿದೆ. ಸಿನಿರಸಿಕರ ಕುತೂಹಲ ಇಮ್ಮಡಿಗೊಳಿಸಲು ಸುಮಾರು 45 ಸೆಕೆಂಡುಗಳ ವಿಡಿಯೊ ತುಣುಕೊಂದನ್ನು ಫಸ್ಟ್‌ ಲುಕ್‌ ಆಗಿ ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ.

ಟಿ.ವಿ ಸುದ್ದಿ ವಾಚಕಿ ಹಾಗೂ ನಟಿಯಾಗಿ ಗಮನ ಸೆಳೆದಿದ್ದ ಶೀತಲ್‌ ಶೆಟ್ಟಿ ‘ಬಿಗ್‌ ಬಾಸ್‌’ ರಿಯಾಲಿಟಿ ಶೋನಲ್ಲೂ ಭಾಗವಹಿಸಿ ಜನಪ್ರಿಯತೆ ಸಂಪಾದಿಸಿದವರು. ಈಗ  ಈ ಚಿತ್ರದ ಮೂಲಕ ನಿರ್ದೇಶಕಿಯಾಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ವಿಂಡೋಸೀಟ್‌ಗಾಗಿ ಕಥೆ– ಚಿತ್ರಕಥೆಯನ್ನು ಶೀತಲ್‌ ಅವರೇ ಹೆಣೆದಿದ್ದಾರೆ. ಈ ಚಿತ್ರಕ್ಕಾಗಿ ಅವರು ಐದು ವರ್ಷಗಳಿಂದ ತಯಾರಿ ನಡೆಸಿಕೊಂಡಿದ್ದರಂತೆ.

‘ರಂಗಿತರಂಗ’ ಖ್ಯಾತಿಯ ನಿರೂಪ್‌ ಭಂಡಾರಿ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಈ ಪಾತ್ರಗಳನ್ನು ಸಂಜನಾ ಆನಂದ್‌ ಮತ್ತು ಅಮೃತಾ ಅಯ್ಯಂಗಾರ್‌ ನಿಭಾಯಿಸುತ್ತಿದ್ದಾರೆ.

ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯ ಚಿತ್ರ‌. ಪ್ರೇಮ ಕಥೆಯ ಎಳೆಯೂ ಇದೆ. ಒಂದು ಕೊಲೆಯ ಸುತ್ತ ಇದು ಸಾಗುತ್ತದೆ. ಇದರಲ್ಲಿ ಪಾತ್ರಗಳಂತೆಯೇ ರೈಲು ಕೂಡ ಪ್ರಧಾನ ಪಾತ್ರವಹಿಸಲಿದೆಯಂತೆ.

ಚಿತ್ರದ ಚಿತ್ರೀಕರಣ ಜನವರಿಯಲ್ಲೇ ಪೂರ್ಣವಾಗಿತ್ತು. ಚಿತ್ರೀಕರಣೋತ್ತರ ಕೆಲಸಗಳನ್ನು ಸದ್ಯ ಮುಗಿಸಿದ್ದು, ಚಿತ್ರ ಬಿಡುಗಡೆ ಹೊಸ್ತಿಲಿಗೆ ಬಂದಿದೆ. ಚಿತ್ರ ಬಿಡುಗಡೆಗಾಗಿ ಚಿತ್ರಮಂದಿರಗಳ ಬಾಗಿಲು ತೆರೆಯುವುದನ್ನು ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕಿ ಶೀತಲ್‌ ಶೆಟ್ಟಿ.

ಈ ಚಿತ್ರಕ್ಕೆ ಜಾಕ್‌ ಮಂಜು ಬಂಡವಾಳ ಹೂಡಿದ್ದಾರೆ. ತಾರಾಗಣದಲ್ಲಿ ರವಿಶಂಕರ್, ಮಧಸೂದನ್‌ ರಾವ್, ಸೂರಜ್‌, ಸಲ್ಮಾನ್‌, ಲೇಖಾ ಇದ್ದಾರೆ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದು, ಯೋಗರಾಜ್‌ ಭಟ್‌, ಕವಿರಾಜ್‌, ಸುಮುಖ್‌ ಅವರ ಸಾಹಿತ್ಯವಿದೆ. ಛಾಯಾಗ್ರಹಣ ವಿಘ್ನೇಶ್‌ ರಾಜ್‌, ಸಂಕಲನ ರಿತ್ವಿಕ್‌ ರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು