ಸೋಮವಾರ, ಡಿಸೆಂಬರ್ 5, 2022
24 °C

ಹಾಲಿವುಡ್‌ಗೆ ಕಾಲಿಡುತ್ತಾರಾ ಯಶ್‌?

ಪ್ರಜಾವಾಣಿ ವೆಬ್‌‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೆಜಿಎಫ್‌–2 ಬೃಹತ್‌ ಯಶಸ್ಸಿನ ನಂತರ ನಟ ಯಶ್‌ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ದುಗದ್ದಲವಿಲ್ಲದೆ ಹಾಲಿವುಡ್‌ನಲ್ಲಿ ಸಿನಿಮಾ ಮಾಡಲು ಯಶ್‌ ತಯಾರಿ ನಡೆಸಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ಅದಕ್ಕೆ ಕಾರಣ ಅಮೆರಿಕ ಪ್ರವಾಸದಲ್ಲಿರುವ ಯಶ್‌ ಭೇಟಿಯಾಗುತ್ತಿರುವ ವ್ಯಕ್ತಿಗಳು. ಲಾಸ್‌ ಏಂಜಲೀಸ್‌ನಲ್ಲಿ ಯಶ್‌ ಎಫ್‌1 ರೇಸರ್‌ ಲೀವಿಸ್‌ ಹ್ಯಾಮಿಲ್ಟನ್‌ ಜೊತೆ ಕಾಣಿಸಿಕೊಂಡಿದ್ದಾರೆ. ಯಶ್‌ ಎಫ್‌1 ರೇಸರ್‌ಗಳೊಂದಿಗೆ ಇರುವ ಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಮೊನ್ನೆಯಷ್ಟೆ ಯಶ್‌ ಜನಪ್ರಿಯ ಹಾಲಿವುಡ್‌ ನಿರ್ದೇಶಕ ಹಾಗೂ ಸಮರ ಕಲೆ ತರಬೇತುದಾರ ಜೆಜೆ ಪೆರ್ರಿ ಜೊತೆ ಕಾಣಿಸಿಕೊಂಡಿದ್ದರು. ತರನ್‌ ಟ್ಯಾಕ್ಟಿಕಲ್‌ಗೆ ಭೇಟಿ ನೀಡಿದ ಯಶ್‌, ಅಲ್ಲಿ ಗನ್ ಹಿಡಿದು ಶೂಟ್ ಮಾಡಿದ್ದಾರೆ. ಈ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, 'ಗುರಿಯನ್ನು ತಲುಪಲು ಯಾವಾಗಲೂ ಒಂದು ಮಾರ್ಗವಿದೆ, ಅದನ್ನು ಗುರುತಿಸುವುದೇ ಸವಾಲು...' ಎಂದು ಬರೆದುಕೊಂಡಿದ್ದರು. ಕೆಜಿಎಫ್‌ನ ಜನಪ್ರಿಯ ಡೈಲಾಗ್‌ ‘ಕಲಾನಿಶಿಕೋವ್‌(ಬಂದೂಕು)’ ಬಳಸಿ, ಮುಂದಿನ ಬಾರಿ ಪ್ರಯತ್ನಿಸೋಣ ಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದರು. ಈಗ ಮತ್ತೆ ಎಫ್‌1 ರೇಸರ್‌ ಭೇಟಿ ಮಾಡಿರುವುದು ಈ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡುತ್ತಿದೆ.

ಕೆಜಿಎಫ್‌–2 ವಿಶ್ವವ್ಯಾಪಿ ಯಶಸ್ವಿ ನಂತರ ಯಶ್‌ ಮುಂದಿನ ಚಿತ್ರದ ಕುರಿತು ಹಲವಾರು ಸಿನಿಮಾಗಳ, ಹಲವಾರು ನಿರ್ದೇಶಕರ ಹೆಸರುಗಳು ಕೇಳಿಬಂದವು. ಮುಖ್ಯವಾಗಿ ತಮಿಳಿನ ಶಂಕರ್‌ ಜೊತೆ ಸಿನಿಮಾ ಮಾಡುತ್ತಾರೆ ಎಂಬ ವದಂತಿ ದಟ್ಟವಾಗಿತ್ತು. ಆದಾಗ್ಯೂ ಯಶ್‌19 ಸಿನಿಮಾ ಯಾವುದು ಎಂಬ ಕುರಿತು ಸ್ಪಷ್ಟತೆ ದೊರೆಯುತ್ತಿಲ್ಲ. ಹಾಲಿವುಡ್‌ನಲ್ಲಿಯೇ ಸಿನಿಮಾ ಮಾಡುತ್ತಾರಾ ಅಥವಾ ಮುಂದಿನ ತಮ್ಮ ಸಿನಿಮಾದಲ್ಲಿ ಹಾಲಿವುಡ್‌ನಲ್ಲಿ ಎಫ್‌1 ರೇಸ್‌, ಸಮರ ಕಲೆಗಳನ್ನು ಅಳವಡಿಸಿಕೊಳ್ಳುತ್ತಾರಾ ಎಂಬುದು ಅಭಿಮಾನಿಗಳಿಗೆ ಪ್ರಶ್ನೆಯಾಗಿಯೇ ಉಳಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು