‘ಬನಾರಸ್’ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ನಟ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾದ ಮೊದಲ ಹಾಡು ‘ಅಯ್ಯೋ ಶಿವನೇ’ ಸೆ.10ರಂದು ತೆರೆಕಾಣಲಿದೆ.

ಈ ಸಿನಿಮಾದಲ್ಲಿ ಝೈದ್ ಖಾನ್ಗೆ ‘ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದು, ನಟಿ ರಚಿತಾ ರಾಮ್ ಹಾಗೂ ‘ಉಪಾಧ್ಯಕ್ಷ’ದ ಮೂಲಕ ತಮ್ಮ ಚಂದನವನದ ಪಯಣ ಆರಂಭಿಸಿದ್ದ ಮಲೈಕಾ ಟಿ. ವಸುಪಾಲ್ ನಾಯಕಿಯರಾಗಿ ನಟಿಸಿದ್ದಾರೆ. ಈಗಾಗಲೇ ಫಸ್ಟ್ಲುಕ್ ಹಾಗೂ ಟೀಸರ್ ಮೂಲಕ ಸಿನಿಮಾ ಕಾಂಟೆಂಟ್ಗಳನ್ನು ಜನರೆದುರಿಗೆ ಇರಿಸಿರುವ ಈ ತಂಡ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಹಾಡನ್ನು ನಿರ್ದೇಶಕ ಅನಿಲ್ ಕುಮಾರ್ ಅವರೇ ಬರೆದಿದ್ದು, ಜಸ್ಕರಣ್ ಸಿಂಗ್ ಹಾಗೂ ಪೃಥ್ವಿ ಭಟ್ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಡಿಗಿದೆ. ಮಲೈಕಾ ಇದರಲ್ಲಿ ಅಭಿನಯಿಸಿದ್ದಾರೆ.

ಕೆ.ವಿ.ಎನ್ ಪ್ರೊಡಕ್ಷನ್ಸ್ ಅರ್ಪಿಸುವ, ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ಜೆ.ಎಸ್ ವಾಲಿ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಸಾಹಸ ನಿರ್ದೇಶನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.