ಬೆಂಗಳೂರು: ಮದುವೆಯಾಗದೆಯೂ ಸೆಟ್ಲ್ ಆಗಬಹುದು ಅಲ್ಲವೇ? ನಾನು ಸೆಟ್ಲ್ ಆಗಿದ್ದೇನೆ, ಕೆಲಸ ಮಾಡುತ್ತಿದ್ದೇನೆ, ಆದಾಯ ಪಡೆಯುತ್ತಿದ್ದೇನೆ, ಖುಷಿಯಾಗಿದ್ದೇನೆ.. ಇನ್ನೇನು ಬೇಕು? ಹೀಗೆಂದು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಹೇಳಿದ್ದಾರೆ.
ಜುಗ್ ಜುಗ್ಗ್ ಜೀಯೊ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರು ಕೇಳಿದ ‘ಮದುವೆ‘ ಕುರಿತ ಪ್ರಶ್ನೆಗೆ ಕಿಯಾರಾ ಹೀಗೆ ಉತ್ತರಿಸಿದ್ದಾರೆ.
ವರುಣ್ ಧವನ್, ಕಿಯಾರಾ ಅಡ್ವಾಣಿ, ಅನಿಲ್ ಕಪೂರ್ ಮತ್ತು ನೀತು ಕಪೂರ್ ಅವರ ತಾರಾಗಣ ಹೊಂದಿರುವ ಜುಗ್ ಜುಗ್ಗ್ ಜೀಯೊ ಚಿತ್ರ, ಶೀಘ್ರದಲ್ಲೇ ತೆರೆಕಾಣಲಿದೆ.