ಮುಂಬೈ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ಕಂಪನಿಯು (BSNL) ‘ಒಟಿಟಿಪ್ಲೇ’ ಜತೆಗೂಡಿ ಮೊಬೈಲ್ ಬಳಕೆದಾರರಿಗೆ ಅಂತರ್ಜಾಲ ಆಧಾರಿತ ಟಿ.ವಿ. ಸೌಲಭ್ಯ ನೀಡಲು ಮುಂದಾಗಿದೆ. ಇದರಿಂದ ಪ್ರೀಮಿಯಂ ಸಹಿತ ಬಿಎಸ್ಎನ್ಎಲ್ ಮೊಬೈಲ್ ಮೂಲಕ 450ಕ್ಕೂ ಹೆಚ್ಚು ಲೈವ್ ಚಾನಲ್ಗಳನ್ನು ವೀಕ್ಷಿಸಬಹುದಾಗಿದೆ.

ಇದಕ್ಕೆ BiTV ಎಂದು ಹೆಸರಿಡಲಾಗಿದ್ದು, ಪುದುಚೇರಿಯಲ್ಲಿ ಪ್ರಾಯೋಗಿಕ ಪರೀಕ್ಷೆ ಆರಂಭಗೊಂಡಿದೆ. ಬಿಎಸ್ಎನ್ಎಲ್ ಮೂಲಕ ಒಟಿಟಿ ಕಾರ್ಯಕ್ರಮಗಳಾದ ಭಕ್ತಿಫ್ಲಿಕ್ಸ್, ಶಾರ್ಟ್ಫಂಡ್ಲಿ, ಕಚ್ಚಾ ಲಂಕಾ, ಸ್ಟೇಜ್, ಓಂ ಟಿವಿ, ಪ್ಲೇಫ್ಲಿಕ್ಸ್, ಫ್ಯಾನ್ಕೋಡ್, ಡಿಸ್ಟ್ರೊ, ಹಬ್ಹಾಪರ್ ಹಾಗೂ ರನ್ ಟಿವಿ ಒಳಗೊಂಡಂತೆ ನೇರ ಪ್ರಸಾರ, ಬ್ಲಾಕ್ಬಸ್ಟರ್ ಸಿನಿಮಾಗಳು, ವೆಬ್ ಸರಣಿಗಳನ್ನು ವೀಕ್ಷಿಸಬಹುದು ಎಂದು ಬಿಎಸ್ಎನ್ಎಲ್ ಸಿಎಂಡಿ ರಾಬರ್ಟ್ ಜೆ. ರವಿ ಹೇಳಿದ್ದಾರೆ.

‘BiTV ಮೂಲಕ ಬಿಎಸ್ಎನ್ಎಲ್ ಉಚಿತವಾಗಿ ಟಿ.ವಿ. ಚಾನಲ್ಗಳನ್ನು ನೀಡುತ್ತಿದೆ. ಇದರಿಂದ ಯಾರು ಎಲ್ಲಿಂದ ಬೇಕಾದರೂ ವೀಕ್ಷಿಸಬಹುದು. ಇದಕ್ಕೆ ಇಂಥದ್ದೇ ಪ್ಲಾನ್ ಇರಬೇಕು ಎಂದೇನೂ ಇಲ್ಲ. ದೇಶದ ಎಲ್ಲಾ ಭಾಷೆಗಳನ್ನು ಮಾತನಾಡುವವರಿಗೂ ಇಲ್ಲಿ ಚಾನಲ್ಗಳಿವೆ’ ಎಂದು ಒಟಿಟಿಪ್ಲೇ ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಇಒ ಅವಿನಾಶ್ ಮುದಲಿಯಾರ್ ತಿಳಿಸಿದ್ದಾರೆ.

‘ಗೂಗಲ್ ಪ್ಲೇ ಸ್ಟೋರ್ನಿಂದ ಒಟಿಟಿಪ್ಲೇ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ 450ಕ್ಕೂ ಹೆಚ್ಚು ಚಾನಲ್ಗಳನ್ನು ವೀಕ್ಷಿಸಬಹುದು. ತಡೆರಹಿತ ಹಾಗೂ ಉತ್ತಮ ಗುಣಮಟ್ಟದ ವಿಡಿಯೊ ಇಲ್ಲಿ ಪ್ರಸಾರವಾಗಲಿದೆ. www.fms.bsnl.in/iptvreg ತಾಣಕ್ಕೆ ಲಾಗಿನ್ ಆಗಬೇಕು. ಬಿಎಸ್ಎನ್ಎಲ್ ಮೊಬೈಲ್ ಸಂಖ್ಯೆಯನ್ನು ದಾಖಲಿಸಿ, ಬರುವ ಒಟಿಪಿ ನಮೂದಿಸಬೇಕು. ಎಸ್ಎಂಎಸ್ ಮೂಲಕ ಮೊಬೈಲ್ಗೆ ಬರುವ ಒಟಿಟಿಪ್ಲೇ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಬಳಕೆದಾರರ ಅಪೇಕ್ಷೆಗೆ ತಕ್ಕಂತೆ ಕಾರ್ಯಕ್ರಮಗಳ ಮಾಹಿತಿ ನೀಡಲು ಕೃತಕ ಬುದ್ಧಿಮತ್ತೆಯ ನೆರವು ಪಡೆಯಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.