ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರಿಯ ರ‍್ಯಾಪರ್‌ ಧರ್ಮೇಶ್‌ ನಿಧನ

Last Updated 22 ಮಾರ್ಚ್ 2022, 10:24 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯತೆ ಪಡೆದಿದ್ದರ‍್ಯಾಪರ್‌, ಯುಟ್ಯೂಬರ್‌ ಧರ್ಮೇಶ್‌ ಪರ್ಮಾರ್‌ ನಿಧನರಾಗಿದ್ದಾರೆ. ಅವರಿಗೆ 24 ವರ್ಷ ವಯಸ್ಸಾಗಿತ್ತು.

ಧರ್ಮೇಶ್‌ ನಿಧನಕ್ಕೆ ನಟ ರಣವೀರ್‌ ಸಿಂಗ್‌, ಸಿದ್ದಾರ್ಥ್‌ ಚತುರ್ವೇದಿ, ಜೋಯಾ ಅಖ್ತರ್‌ ಸೇರಿದಂತೆ ಹಲವಾರು ಬಾಲಿವುಡ್‌ ತಾರೆಗಳು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ರ‍್ಯಾಪರ್‌ ಆಗಿದ್ದ ಧರ್ಮೇಶ್‌ ಗಲ್ಲಿಬಾಯ್‌ ಸಿನಿಮಾದಲ್ಲಿ ಹಾಡೊಂದಕ್ಕೆ ಧನಿ ನೀಡಿದ್ದರು. ಎಂ ಟಾಡ್‌ ಪಾಡ್‌ ವೇದಿಕೆ ಮೂಲಕರ‍್ಯಾಪ್‌ ಮಾಡುತ್ತಿದ್ದರು. ಕಿರುತೆರೆಯಲ್ಲೂ ಹಲವು ಕಾರ್ಯಕ್ರಮಗಳನ್ನು ನೀಡಿದ್ದರು.

ಧರ್ಮೇಶ್ ನಿಧನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT