ನವದೆಹಲಿ: ‘ಐಸಿ–814– ದಿ ಕಂದಹಾರ್ ಹೈಜಾಕ್’ ವೆಬ್‌ಸರಣಿ ಪ್ರಸಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನೀಡಿರುವ ಸಮನ್ಸ್‌ಗೆ ಪ್ರತಿಕ್ರಿಯಿಸಿರುವ ನೆಟ್‌ಫ್ಲಿಕ್ಸ್, ದೇಶದ ಭಾವನೆಗಳಿಗೆ ಧಕ್ಕೆಯಾಗದಂತಹ ವಿಷಯಗಳನ್ನು ಪ್ರಸಾರ ಮಾಡುವುದಾಗಿ ಭರವಸೆ ನೀಡಿದೆ.
ಭವಿಷ್ಯದಲ್ಲಿಯೂ ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುವ ವಿಷಯಗಳನ್ನು ಪರಿಶೀಲನೆ ಮಾಡಲಾಗುದು. ದೇಶ ಮತ್ತು ದೇಶದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಖಾತ್ರಿಪಡಿಸಿಕೊಳ್ಳುವುದಾಗಿ ನೆಟ್‌ಫ್ಲಿಕ್ಸ್ ಹೇಳಿದೆ ಎಂದು ಎಎನ್‌ಐ ವರದಿ ಮಾಡಿದೆ.
‘ಐಸಿ–814– ದಿ ಕಂದಹಾರ್ ಹೈಜಾಕ್’ ವೆಬ್‌ಸರಣಿಯಲ್ಲಿ ಅಪಹರಣಕಾರರನ್ನು ಬಿಂಬಿಸಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿ ಸಚಿವಾಲಯ ಕಾರ್ಯಕ್ರಮದ ಮುಖ್ಯಸ್ಥರಿಗೆ ಸಮನ್ಸ್ ನೀಡಿತ್ತು.
ವೆಬ್ ಸರಣಿಯಲ್ಲಿ ವಿಜಯ್ ವರ್ಮಾ, ಪಂಕಜ್ ಕುಮಾರ್, ದಿಯಾ ಮಿರ್ಜಾ, ನಾಸೀರುದ್ದೀನ್ ಶಾ, ಅರವಿಂದ್ ಸ್ವಾಮಿ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.