ಬೆಂಗಳೂರು: ರೋಹನ್‌ಪ್ರೀತ್ ಸಿಂಗ್ ಜತೆ ಸಪ್ತಪದಿ ತುಳಿದ ಬಳಿಕ ನೇಹಾ ಕಕ್ಕರ್ ಅವರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಎರಡನೇ ಬಾರಿ ಕೇಳಿಬಂದಿದೆ.
ನೇಹಾ ಕಕ್ಕರ್ ಅವರು ಇಂಡಿಯನ್ ಐಡಲ್ 12ರ ತೀರ್ಪುಗಾರರ ಸ್ಥಾನ ಬಿಟ್ಟು ತೆರಳಿದ್ದಾರೆ. ಅಲ್ಲಿ ಅವರ ಸಹೋದರಿ ಸೋನು, ಶೋ ನಡೆಸಿಕೊಡುತ್ತಿದ್ದಾರೆ.
ಈ ಸಂದರ್ಭದಲ್ಲಿ ನೇಹಾ ಅವರು ಗರ್ಭಿಣಿಯಾಗಿದ್ದಾರೆ, ಅದಕ್ಕಾಗಿ ಶೋ ತೊರೆದು ಹೋಗಿದ್ದಾರೆ ಎಂದು ಸುದ್ದಿಯಾಗಿತ್ತು.
ನೇಹಾ ಕಕ್ಕರ್ ಅವರು ಈ ಬಗ್ಗೆ ಬಳಿಕ ಸ್ಪಷ್ಟನೆ ನೀಡಿದ್ದು, ಮದುವೆ ಬಳಿಕ ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರಿಂದ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ಸ್ವಲ್ಪ ವಿಶ್ರಾಂತಿ ಬೇಕಾಗಿತ್ತು. ಅದಕ್ಕಾಗಿ ಟಿವಿ ಶೋ ಬಿಟ್ಟು ಸ್ವಲ್ಪ ದಿನ ದೂರ ಉಳಿಯುವುದಾಗಿ ಹೇಳಿದ್ದಾರೆ.