ಬೆಂಗಳೂರು: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಹಲವು ಸಿನಿಮಾ ಹಾಗೂ ವೆಬ್ ಸರಣಿಗಳು ಒಟಿಟಿಗೆ ಬರುತ್ತಿವೆ.

ಈ ವಾರ (ಡಿ.22 ರಿಂದ ಡಿ.30) ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಸನ್ನೆಕ್ಸ್ಟ್, ಜೀ 5 ಸೇರಿದಂತೆ ಬೇರೆ ಬೇರೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ, ನೋಡಲೇಬೇಕಾದ ಸಿನಿಮಾ ಮತ್ತು ವೆಬ್ ಸರಣಿಗಳ ಕುರಿತ ಮಾಹಿತಿ ಇಲ್ಲಿದೆ.

ಈ ವಾರ ಬಿಡುಗಡೆಯಾಗುತ್ತಿರುವ ಸಿನಿಮಾಗಳು

ಸಿನಿಮಾ: ಬಾಹುಬಲಿ: ದಿ ಎಪಿಕ್

ಭಾಷೆ: ತೆಲುಗು

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಡಿ. 25

ಟಾಲಿವುಡ್ನ ಪ್ರಸಿದ್ಧ ಸಿನಿಮಾ ಸರಣಿ ‘ಬಾಹುಬಲಿ’ಯ ಎರಡು ಸಿನಿಮಾಗಳನ್ನು( 'ಬಾಹುಬಲಿ: ದಿ ಬಿಗಿನಿಂಗ್' ಮತ್ತು 'ಬಾಹುಬಲಿ: ದಿ ಕನ್ಕ್ಲೂಷನ್') ಒಟ್ಟಾಗಿಸಿ ಬಿಡುಗಡೆ ಮಾಡಲಾಗಿದ್ದ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಡಿ. 25ರಂದು ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಲಿದೆ. 2025ರ ನವೆಂಬರ್ನಲ್ಲಿ ಇದನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.

ಸಿನಿಮಾ: 11:11

ಭಾಷೆ: ತೆಲುಗು

ಒಟಿಟಿ: ಆಹಾ ವಿಡಿಯೊ

ಬಿಡುಗಡೆ ದಿನಾಂಕ: ಡಿ. 23

ದೊಡ್ಡ ಸಿನಿಮಾ ನಿರ್ದೇಶಕನಾಗುವ ಕನಸು ಹೊತ್ತ ಯುವಕನೊಬ್ಬ, ಜೀವನದ ಯಾವುದೋ ಕಾಲಘಟ್ಟದಲ್ಲಿ ಎಡವಿ ಬೀಳುತ್ತಾನೆ. ಆದರೆ, ವಿಜ್ಞಾನಿಯಾಗಿದ್ದ ಅವನ ತಂದೆ, ಅವನಿಗೆ ವಿಶಿಷ್ಟ ಸ್ಮಾರ್ಟ್ ವಾಚ್ ಅನ್ನು ಗಿಫ್ಟ್ ಕೊಡುತ್ತಾರೆ. ಅದು ಟೈಂ ಟ್ರಾವೆಲ್ ಮಾಡಬಹುದಾದ ವಾಚ್. ಅದನ್ನು ಉಪಯೋಗಿಸಿಕೊಂಡು, ಅವನು ತನ್ನ ಜೀವನದಲ್ಲಿ ಆಗಿದ್ದ ತಪ್ಪನ್ನು ಸರಿಪಡಿಸಿಕೊಳ್ಳಲು ಯಶಸ್ವಿಯಾಗುತ್ತಾನೆಯೇ ಎನ್ನುವುದೇ ‘11:11’ ಸಿನಿಮಾ. ತೆಲುಗು ಭಾಷೆಯ ಟೈಂ ಟ್ರಾವೆಲ್ ಸಿನಿಮಾವನ್ನು ಆಹಾ ವಿಡಿಯೊ ಒಟಿಟಿಯಲ್ಲಿ ನೋಡಬಹುದು.

ಸಿನಿಮಾ: ಮಿಡಲ್ ಕ್ಲಾಸ್

ಭಾಷೆ: ತಮಿಳು

ಒಟಿಟಿ: ಜೀ 5

ಬಿಡುಗಡೆ ದಿನಾಂಕ: ಡಿ. 24

ಮಧ್ಯಮ ವರ್ಗದ ಕುಟುಂಬವೊಂದರ ಹಣಕಾಸಿನ ಸಮಸ್ಯೆ, ದೈನಂದಿನ ಜೀವನವನ್ನ ತಿಳಿಹಾಸ್ಯದ ಮೂಲಕ ಕಟ್ಟಿಕೊಟ್ಟಿರುವ ತಮಿಳು ಭಾಷೆಯ ಕಾಮಿಡಿ ಡ್ರಾಮಾ ಸಿನಿಮಾ ‘ಮಿಡಲ್ ಕ್ಲಾಸ್’. ಹಾಸ್ಯದ ಮೂಲಕವೇ ಕೌಟುಂಬಿಕ ಮೌಲ್ಯವನ್ನು ತಿಳಿಸುವ ಈ ಸಿನಿಮಾವನ್ನು ಜೀ 5 ಒಟಿಟಿಯಲ್ಲಿ ನೋಡಬಹುದು. ಈ ಸಿನಿಮಾವನ್ನು ಕಿಶೋರ್ ಎಂ. ರಾಮಲಿಂಗಂ ನಿರ್ದೇಶಿಸಿದ್ದಾರೆ.

ಸಿನಿಮಾ: ಆಂಧ್ರ ಕಿಂಗ್ ತಾಲೂಕು

ಭಾಷೆ: ತೆಲುಗು

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಡಿ. 25

ಸಿನಿಮಾ ನಟನೊಬ್ಬನ ಖಟ್ಟರ್ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದಾನೆ. ಜೀವನ ಪೂರ್ತಿ ಸಿನಿಮಾ ನಟನನ್ನೇ ಧ್ಯಾನ ಮಾಡುವ ಆ ಅಭಿಮಾನಿಗೆ ಕಷ್ಟವೊಂದು ಬಂದಿದೆ. ಈಗ ಅದನ್ನು ಪರಿಹಾರ ಮಾಡಲು, ಆ ನಟ ಬರುತ್ತಾನೆಯೇ ಎನ್ನುವುದೇ ‘ಆಂಧ್ರ ಕಿಂಗ್ ತಾಲೂಕು’ ಸಿನಿಮಾದ ಕತೆಯ ತಿರುಳು. ಸರಳ ಪ್ರೇಮ ಕತೆ ಹಾಗೂ ಚಿತ್ರನಟನೊಬ್ಬನ ಕಟ್ಟರ್ ಅಭಿಮಾನಿಯೊಬ್ಬನ ನೋವು ನಲಿವುಗಳು ಈ ಸಿನಿಮಾದ ಪ್ರಮುಖ ಅಂಶ. ರಾಮ್ಪೋತಿನೇನಿ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಸ್ಯಾಂಡಲ್ವುಡ್ ನಟ ಉಪೇಂದ್ರ ಅವರು ಸ್ಟಾರ್ ನಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವೆಬ್ಸರಣಿ: ಸ್ಟ್ರೇಂಜರ್ ಥಿಂಗ್ಸ್ 5 – ವ್ಯಾಲೂಮ್ 2

ಭಾಷೆ: ಇಂಗ್ಲಿಷ್

ಒಟಿಟಿ: ನೆಟ್ಫ್ಲಿಕ್ಸ್

ಬಿಡುಗಡೆ ದಿನಾಂಕ: ಡಿ. 26

ನೆಟ್ಫ್ಲಿಕ್ಸ್ ಒರಿಜಿನಲ್ನ ಪ್ರಮುಖ ವೆಬ್ ಸರಣಿ ‘ಸ್ಟ್ರೇಂಜರ್ ಥಿಂಗ್ಸ್ ’ ಸರಣಿಯ 5ನೇ ಸೀಜನ್ನ ವ್ಯಾಲೂಮ್ 2 ಡಿ.26ರಂದು ಬಿಡುಗಡೆಯಾಗಲಿದೆ. ಹಾಕಿನ್ಸ್ ತಂಡವು ವೆಕ್ನಾ ವಿರುದ್ಧ ಗೆದ್ದು, ಜಗತ್ತನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆಯೇ ಎನ್ನುವ ಕುತೂಹಲಕ್ಕೆ ಈ ಎಪಿಸೋಡ್ಗಳು ಉತ್ತರ ನೀಡುತ್ತವೆ. ಈಗಾಗಲೇ 5ನೇ ಸೀಜನ್ನಲ್ಲಿ 4 ಎಪಿಸೋಡ್ಗಳು ಬಿಡುಗಡೆಯಾಗಿದ್ದು, ವ್ಯಾಲೂಮ್ 2ನಲ್ಲಿ ಪ್ರತಿ ಶುಕ್ರವಾರ ಒಂದರಂತೆ ನಾಲ್ಕು ಎಪಿಸೋಡ್ಗಳು ಬಿಡುಗಡೆಯಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.