ಯಾಮಿ ಗೌತಮ್ ಧರ್ ಹಾಗೂ ಇಮ್ರಾನ್ ಹಶ್ಮಿ ಮುಖ್ಯಪಾತ್ರದಲ್ಲಿ ನಟಿಸಿರುವ ಮಹಿಳಾ ಹಕ್ಕುಗಳ ಕುರಿತ ನೈಜ ಘಟನೆ ಆಧಾರಿತ ಬಾಲಿವುಡ್ ಚಲನಚಿತ್ರ ‘ಹಕ್’ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

ಫ್ಯಾಮಿಲಿ ಮ್ಯಾನ್, ರಾಣಾ ನಾಯ್ಡು ವೆಬ್ ಸರಣಿಗಳ ನಿರ್ದೇಶಕರಾಗಿರುವ ಸುಪರ್ಣ್ ವರ್ಮಾ ಆ್ಯಕ್ಷನ್ ಕಟ್ ಹೇಳಿರುವ ಕೋರ್ಟ್ ಡ್ರಾಮ ಸಿನಿಮಾ ‘ಹಕ್’, ಜನವರಿ 2ರಂದು ‘ನೆಟ್ಫ್ಲಿಕ್ಸ್’ನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾವು 2 ಗಂಟೆ 11 ನಿಮಿಷ ಅವಧಿಯಿದೆ.

ಸುಪ್ರೀಂ ಕೋರ್ಟ್ನಲ್ಲಿ ‘ಷಾ ಬಾನೋ’ ಪ್ರಕರಣ ಎಂದೇ ಪ್ರಸಿದ್ದವಾಗಿದ್ದ, ಮುಸ್ಲಿಂ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳದ ವಿರುದ್ಧ ನಡೆಸಿದ ಮಹಿಳೆಯರ ಹಕ್ಕುಗಳ ಹೋರಾಟದ ಕುರಿತು ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ.

2025ರ ನವೆಂಬರ್ 7ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಚಿತ್ರವು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಆದರೆ, ₹40 ಕೋಟಿ ಬಜೆಟ್ನಲ್ಲಿ ತಯಾರಾಗಿದ್ದ ಸಿನಿಮಾವು ಬಾಕ್ಸ್ಆಫೀಸ್ನಲ್ಲಿ ₹28.68 ಕೋಟಿ ಗಳಿಸುವ ಮೂಲಕ ನಿರಾಸೆ ಅನುಭವಿಸಿತ್ತು.

‘ಹಕ್’ ಸಿನಿಮಾಗೆ ಐಎಂಡಿಬಿ ಅಲ್ಲಿ 8.6 ರೇಟಿಂಗ್ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.