ನಿರ್ದೇಶಕ ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ಸಿನಿಮಾ ಸೆ.26ರಂದು ಸನ್ನೆಕ್ಸ್ಟ್ ಒಟಿಟಿ ವೇದಿಕೆಯಲ್ಲಿ ರಿಲೀಸ್ ಆಗಲಿದೆ.

ಜುಲೈ 11ರಂದು ತೆರೆಕಂಡಿದ್ದ ಈ ಸಿನಿಮಾವನ್ನು ಡಿ.ಕ್ರಿಯೇಷನ್ಸ್ ಮೂಲಕ ದೇವರಾಜ್ ಆರ್. ನಿರ್ಮಾಣ ಮಾಡಿದ್ದರು. ಸಿನಿಮಾದಲ್ಲಿ ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಜೋಡಿ ನಟಿಸಿದೆ. ಇದೊಂದು ಟ್ರಾವೆಲಿಂಗ್ ಸ್ಟೋರಿಯಾಗಿದ್ದು, ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ಕಥೆ ದಾರಿಯಲ್ಲಿ ಸಾಗುತ್ತದೆ. ಕಥೆಯ ನಾಯಕ ಆಕಾಶ್ ಮತ್ತು ನಾಯಕಿ ಭೂಮಿ ಐದು ವರ್ಷಗಳಿಂದ ಪ್ರೀತಿಸುತ್ತಿರುತ್ತಾರೆ. ಇಬ್ಬರ ನಡುವಿನ ಸಂಬಂಧ ಸರಿ ಬರುತ್ತಿಲ್ಲ. ಸಣ್ಣ, ಸಣ್ಣ ವಿಷಯಗಳಿಗೂ ಜಗಳ. ಹೀಗಾಗಿ ಮದುವೆಯಾಗದೇ ಸಂಬಂಧವನ್ನು ಕಡಿದುಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಇಬ್ಬರೂ ಒಂದು ವಾರ ಒಟ್ಟಿಗೆ ಪಯಣಿಸಿ, ಬಳಿಕ ಬೇರೆಯಾಗಲು ನಿರ್ಧಾರ ಮಾಡುತ್ತಾರೆ. ಆ ಒಂದು ವಾರದ ಬದುಕಿನ ಪಯಣವೇ ಕಥೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.