ಬೆಂಗಳೂರು: ಪಾಕಿಸ್ತಾನ ಮೂಲದ ನಟಿ ಆಯೇಷಾ ಒಮರ್ ಅವರು ಮದುವೆಯೊಂದರಲ್ಲಿ ನೃತ್ಯ ಮಾಡಿದ್ದಕ್ಕೆ ಟ್ರೋಲ್‌ಗೆ ಸಿಲುಕಿದ್ದಾರೆ.
ಆಯೇಷಾ ಒಮರ್ ಅವರು ನಟಿಯಾಗಿ ಮಾತ್ರವಲ್ಲದೆ, ಗಾಯಕಿ ಮತ್ತು ಯೂಟ್ಯೂಬರ್ ಆಗಿಯೂ ಜನಪ್ರಿಯತೆ ಗಳಿಸಿದ್ದಾರೆ.
ಆಯೇಷಾ, ‘ಮುನ್ನಿ ಬದ್ನಾಮ್ ಹುಯಿ‘ ಹಾಡಿಗೆ ಮದುವೆ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಿದ್ದರು. ಅದರ ವಿಡಿಯೊ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿತ್ತು.
ಅಲ್ಲದೆ, ಟ್ರೋಲ್ ಜತೆಗೆ, ಕೆಲವರು ಮದುವೆಯಲ್ಲಿ ನೃತ್ಯ ಮಾಡಿದರೆ ಎಷ್ಟು ಚಾರ್ಜ್ ಮಾಡುತ್ತೀರಿ ಎಂದು ಕಾಮೆಂಟ್ ಮೂಲಕ ಪ್ರಶ್ನಿಸಿದ್ದರು.
ಇದಕ್ಕೆ ಆಯೇಷಾ ಅವರು ಕಾಮೆಂಟ್ ಮೂಲಕವೇ ಉತ್ತರಿಸಿದ್ದು, ನಾನು ಹಾಗೆಲ್ಲ ಯಾರದೋ ಮದುವೆಯಲ್ಲಿ ಕುಣಿಯುವುದಿಲ್ಲ. ಅದು ನನ್ನ ಆಪ್ತ ಗೆಳೆಯರ ಮದುವೆ ಕಾರ್ಯಕ್ರಮವಾಗಿತ್ತು. ಅಲ್ಲಿ ನಡೆದ ಸಂತೋಷಕೂಟದಲ್ಲಿ ಭಾಗಿಯಾಗಿದ್ದು ಹೊರತು ಸಂಭಾವನೆಗಾಗಿ ನೃತ್ಯ ಮಾಡಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ, ನಮಗೂ ಒಂದು ಸಾಮಾನ್ಯ ಜೀವನವಿರುತ್ತದೆ. ನಮ್ಮ ಬ್ಯುಸಿ ಜೀವನಶೈಲಿಯ ಮಧ್ಯೆಯೂ ಗೆಳೆಯರು ಮತ್ತು ಕುಟುಂಬಕ್ಕಾಗಿ ನಾವು ಸಮಯ ಮೀಸಲಿಡುತ್ತೇವೆ. ಎಲ್ಲವೂ ಹಣಕ್ಕಾಗಿಯೇ ಅಲ್ಲ ಎಂದು ಸರಿಯಾಗಿಯೇ ಉತ್ತರ ನೀಡುವ ಮೂಲಕ ಟ್ರೋಲ್ ಮಾಡುವವರ ಬಾಯಿ ಮುಚ್ಚಿಸಿದ್ದಾರೆ.