ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ ಬಿ. ಶೆಟ್ಟಿ ಅಭಿನಯದ ‘ಟೋಬಿ’ ಡಿ. 22ಕ್ಕೆ ಒಟಿಟಿಗೆ

Published 18 ಡಿಸೆಂಬರ್ 2023, 11:58 IST
Last Updated 18 ಡಿಸೆಂಬರ್ 2023, 11:58 IST
ಅಕ್ಷರ ಗಾತ್ರ

ರಾಜ್‌ ಬಿ.ಶೆಟ್ಟಿ, ಚೈತ್ರ ಜೆ.ಆಚಾರ್‌ ಹಾಗೂ ಸಂಯುಕ್ತ ಹೊರನಾಡು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಟೋಬಿ’ ಸಿನಿಮಾ ಡಿಸೆಂಬರ್‌ 22ರಂದು ಒಟಿಟಿ ವೇದಿಕೆ ಸೋನಿಲಿವ್‌ನಲ್ಲಿ ಬಿಡುಗಡೆಯಾಗಲಿದೆ. 

ನಟ ದಿವಂಗತ ಪುನೀತ್ ರಾಜ್‌ಕುಮಾರ್ ನಟಿಸಿದ ಕೊನೆಯ ಚಿತ್ರ ‘ಜೇಮ್ಸ್’ ಸಿನಿಮಾ ಸೋನಿಲಿವ್‌ನಲ್ಲಿ ಬಿಡುಗಡೆಯಾಗಿತ್ತು. ಟೋಬಿ, ಇದೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೊಳ್ಳಲಿರುವ ಎರಡನೇ ಕನ್ನಡ ಚಿತ್ರವಾಗಿದೆ.

‘ಟೋಬಿ’ಗೆ ಬಾಸಿಲ್‌ ಅಲ್ಚಲಕ್ಕಲ್‌ ಆ್ಯಕ್ಷನ್‌ ಕಟ್‌ ಹೇಳಿದ್ದು, ಸಿನಿಮಾದ ಮೂಲ ಕಥೆಯನ್ನು ಟಿ.ಕೆ.ದಯಾನಂದ್‌ ಬರೆದಿದ್ದಾರೆ. ರಾಜ್‌ ಬಿ.ಶೆಟ್ಟಿ ಇದನ್ನು ವಿಸ್ತರಿಸಿದ್ದಾರೆ. ‘ಲೈಟರ್‌ ಬುದ್ಧ ಫಿಲ್ಮ್ಸ್‌ನಡಿ ನಿರ್ಮಾಣವಾದ ರಾಜ್‌ ಬಿ.ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ರವಿ ರೈ ಕಳಸ ಅವರೇ ‘ಟೋಬಿ’ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಮಿದುನ್‌ ಮುಕುಂದನ್‌ ಸಂಗೀತ ನಿರ್ದೇಶನವಿದ್ದು, ಪ್ರವೀಣ್‌ ಶ್ರೀಯನ್ ಛಾಯಾಗ್ರಹಣವಿದೆ. ‘ಗರುಡ ಗಮನ..’ ಸಿನಿಮಾದ ತಾಂತ್ರಿಕ ವಿಭಾಗದಲ್ಲಿ ಇದೇ ತಂಡ ಕಾರ್ಯನಿರ್ವಹಿಸಿದೆ. ಗೋಪಾಲಕೃಷ್ಣ ದೇಶಪಾಂಡೆ, ರಾಜ್ ದೀಪಕ್ ಶೆಟ್ಟಿ, ಭರತ್ ಜಿ.ಬಿ ಮತ್ತಿತರರು ತಾರಾಬಳಗದಲ್ಲಿದ್ದಾರೆ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT