ಬೆಂಗಳೂರು: ಆಶ್ಲೀಲ ವಿಡಿಯೊ ಪ್ರದರ್ಶಿಸುವ ಆ್ಯಪ್ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್ ಕುಂದ್ರಾ, ಸಿನಿಮಾ ವೀಕ್ಷಣೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ಸಂದರ್ಭ ಮುಖ ಪೂರ್ತಿ ಮುಚ್ಚಿಕೊಂಡು ಹೋಗಿ ಟ್ರೋಲ್‌ಗೆ ಸಿಲುಕಿದ್ದಾರೆ.
ವಿಡಿಯೊ ಆ್ಯಪ್ ಪ್ರಕರಣದ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ.
ಆದರೆ ಮುಂಬೈನಲ್ಲಿ ಸೋಮವಾರ ರಾತ್ರಿ ನಡೆದ ‘ದಿ ಬ್ಯಾಟ್‌ಮನ್‘ ಸಿನಿಮಾ ಪ್ರದರ್ಶನದ ವೇಳೆ ರಾಜ್ ಕುಂದ್ರಾ, ಛಾಯಾಗ್ರಾಹಕರ ಕಣ್ಣಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮುಖವನ್ನು ಪೂರ್ತಿ ಮುಚ್ಚುವ ಉಡುಪು ಧರಿಸಿ ಆಗಮಿಸಿದ್ದರು.
ಆದರೆ ಅವರ ಗುರುತು ಹಿಡಿದ ಛಾಯಾಗ್ರಾಹಕರು, ಕುಂದ್ರಾ ಅವರು ಕಾರಿನಿಂದ ಇಳಿಯುತ್ತಿದ್ದಂತೆ ಫೋಟೊ ಕ್ಲಿಕ್ಕಿಸಿದ್ದಾರೆ.