ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗ ಚೈತನ್ಯರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ ಸಮಂತಾ

Last Updated 23 ಮಾರ್ಚ್ 2022, 12:19 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದ ಸಮಂತಾ ಮತ್ತು ನಾಗಚೈತನ್ಯ ಜೋಡಿ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು.

ಅದಾದ ಬಳಿಕ ಸಮಂತಾ ಅವರು, ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಹೆಸರಿನ ಜತೆಗಿದ್ದ 'ಅಕ್ಕಿನೇನಿ'ಹೆಸರನ್ನು ಅಳಿಸಿ ಹಾಕಿ, 'ಸಮಂತಾ ರುತ್ ಪ್ರಭು ಅಫೀಶಿಯಲ್' ಎಂದು ಬದಲಾಯಿಸಿಕೊಂಡಿದ್ದರು.

ಜತೆಗೇ, ವೈಯಕ್ತಿಕ ಜೀವನ ಮತ್ತು ಆಯ್ಕೆಗಳು ಹಾಗೂ ವಿಚ್ಛೇದನದ ಬಳಿಕ ಕೇಳಿಬಂದ ಚುಚ್ಚು ಮಾತುಗಳಿಗೂ ಸಮಂತಾ ನೇರವಾಗಿ ಉತ್ತರ ನೀಡಿ ಪೋಸ್ಟ್ ಮಾಡಿದ್ದರು.

ಈ ಬಾರಿ ಸಮಂತಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ನಾಗ ಚೈತನ್ಯ ಅವರನ್ನು ಅನ್‌ಫಾಲೋ ಮಾಡಿದ್ದಾರೆ.

ಅಲ್ಲದೆ, ನಾಗಚೈತನ್ಯ ಜತೆಗಿರುವ ಫೋಟೊಗಳು ಮತ್ತು ಟ್ಯಾಗ್ ಮಾಡಲಾದ ಚಿತ್ರಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT