ರಾಯಪುರ: ಛತ್ತೀಸ್‌ಗಡದ ಖ್ಯಾತ ಯುಟ್ಯೂಬರ್ ದೇವರಾಜ್ ಪಟೇಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ವಿಡಿಯೊ ಶೂಟಿಂಗ್ ಮುಗಿಸಿಕೊಂಡು ಬೈಕ್‌ನಲ್ಲಿ ರಾಯಪುರಕ್ಕೆ ಹಿಂತಿರುವಾಗ ಬೈಕ್ ಮತ್ತು ಟ್ರಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ದೇವರಾಜ್ ಬೈಕಿನ ಹಿಂದೆ ಕುಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ದೇವರಾಜ್ ಯುಟ್ಯೂಬರ್ ಮಾತ್ರವಲ್ಲದೇ ಅವರು ಕಾಮಿಡಿಯನ್ ಸಹ ಆಗಿದ್ದರು. ಸ್ಟ್ಯಾಂಡ್‌ಆಫ್ ಕಾಮಿಡಿ ಸೇರಿದಂತೆ ಹಲವಾರು ಕಾಮಿಡಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.