ಮಂಗಳವಾರ, ಡಿಸೆಂಬರ್ 7, 2021
24 °C

ಡ್ರಗ್ಸ್‌ ಪ್ರಕರಣ: ಆರ್ಯನ್ ಖಾನ್ ಜೀವಕ್ಕೆ ಅಪಾಯವಿದೆ ಎಂದ ಕಮಾಲ್ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Bollywood actor Shah Rukh Khan's son Aryan Khan being escorted by officals. Credit: AFP Photo

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ಆರ್ಯನ್ ಖಾನ್ ಜೀವಕ್ಕೆ ಅಪಾಯವಿದೆ ಎಂದು ಬಾಲಿವುಡ್ ನಟ ಕಮಾಲ್ ಆರ್ ಖಾನ್ ಕಳವಳ ವ್ಯಕ್ತಪಡಿಸಿದ್ದಾರೆ.

ಶಾರುಖ್ ಖಾನ್ ಪುತ್ರನ ದುಸ್ಥಿತಿ ಕುರಿತು ಮರುಗಿರುವ ಕಮಾಲ್ ಆರ್ ಖಾನ್, ಆರ್ಯನ್ ಖಾನ್‌ರನ್ನು ಅಕ್ಟೋಬರ್ 20ರವರೆಗೆ ಜೈಲಿನಲ್ಲಿ ಇರಿಸಿಕೊಳ್ಳಲು ಎನ್‌ಸಿಬಿ ಯಶಸ್ವಿಯಾಗಿದೆ. ಅಲ್ಲಿಯವರೆಗೆ ಆರ್ಯನ್‌ ನರಕದಲ್ಲಿ ಇರಬೇಕಿದೆ. ಈ ನೋವನ್ನು ಅವರು ಸಹಿಸಿಕೊಳ್ಳಬಹುದೇ? ಅವರ ಜೀವ ಅಪಾಯದಲ್ಲಿದೆ, ಅವರಿಗಾಗಿ ನಾನು ಪ್ರಾರ್ಥಿಸುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಮೊದಲು ಕಮಾಲ್ ಖಾನ್, ಬಾಲಿವುಡ್ ಮಂದಿ ಶಾರುಖ್ ಪುತ್ರನ ಪ್ರಕರಣ ಕುರಿತು ಮಾತನಾಡುತ್ತಿಲ್ಲ, ಸಹಾಯಕ್ಕೆ ಬರುತ್ತಿಲ್ಲ ಎಂದು ದೂರಿದ್ದರು.

ಕ್ರೂಸ್ ಹಡಗಿನಲ್ಲಿ ಪಾರ್ಟಿ ಮಾಡುವ ಸಂದರ್ಭ ಮಾದಕವಸ್ತು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಅ.2ರಂದು ಆರ್ಯನ್ ಖಾನ್ ಬಂಧನವಾಗಿತ್ತು.

ಆರ್ಯನ್ ಖಾನ್ ಬೆಂಬಲಿಸಿ ಬಾಲಿವುಡ್‌ನ ಸುನೀಲ್ ಶೆಟ್ಟಿ, ಹೃತಿಕ್ ರೋಷನ್ ಸಹಿತ ಹಲವರು ಟ್ವೀಟ್ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು