ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಬಾಲಿವುಡ್ ನಟಿ ಆಲಿಯಾ ಭಟ್

ಬೆಂಗಳೂರು: ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರಾದ ಆಲಿಯಾ ಭಟ್, 40 ದಿನಗಳ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ಸುದ್ದಿಯಾಗಿದ್ದಾರೆ.
ಫಿಟ್ನೆಸ್ ಕುರಿತು ಬಾಲಿವುಡ್ ಮಂದಿಯಲ್ಲಿ ತುಸು ಹೆಚ್ಚೇ ಎನ್ನಿಸುವಷ್ಟು ಕಾಳಜಿ ಇರುತ್ತದೆ.
ಅದಕ್ಕೆ ಪೂರಕವಾಗಿ, ನಟಿ ಆಲಿಯಾ ಭಟ್ ಕೂಡ ಜಿಮ್‌ಗೆ ಹೋಗಲಾರಂಭಿಸಿದ್ದು, 40 ದಿನಗಳ ಚಾಲೆಂಜ್ ಪೈಕಿ, ಈಗಾಗಲೇ 20 ದಿನ ಪೂರೈಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಫೋಟೊ ಒಂದನ್ನು ಪೋಸ್ಟ್ ಮಾಡಿರುವ ನಟಿ ಆಲಿಯಾ ಭಟ್, ಈಗಾಗಲೇ 20 ದಿನ ಮುಗಿದಿದೆ, ಇನ್ನು 20 ದಿನ ಬಾಕಿ ಇದೆ ಎಂದು ಸೆಲ್ಫಿ ಫೋಟೊ ಹಾಕಿದ್ದಾರೆ.
ಸಂವಾದ – ಸಿನಿಮಾ ಪ್ರಶಸ್ತಿಗೂ ಜನರೇ ತೀರ್ಪುಗಾರರಾಗಲಿ: ಅನಂತನಾಗ್
ಆಲಿಯಾ ಫಿಟ್ನೆಸ್ ಕುರಿತ ಫೋಟೊ ಇರುವ ಪೋಸ್ಟ್ ನೋಡಿ, ನಟಿ ಕತ್ರಿನಾ ಕೈಫ್, ಅನೈತಾ ಶ್ರಾಫ್, ಮಲೈಕಾ ಅರೋರಾ, ಮನೀಷ್ ಮಲ್ಹೋತ್ರಾ ಮುಂತಾದ ಪ್ರಮುಖರು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ನಟಿ ಜಾಕ್ವೆಲಿನ್ಗೆ 'ಸ್ವಲ್ಪ ಜೋಪಾನ' ಎಂದು ಅನೂಪ್ ಭಂಡಾರಿ ಹೇಳಿದ್ದೇಕೆ?
ಅಲ್ಲದೆ, 12 ಲಕ್ಷಕ್ಕೂ ಅಧಿಕ ಮಂದಿ ಆಲಿಯಾ ಫೋಟೊ ಲೈಕ್ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.