ಭಾನುವಾರ, ನವೆಂಬರ್ 28, 2021
21 °C

ಸೂರ್ಯ ನಮಸ್ಕಾರ ಆರೋಗ್ಯಕ್ಕೆ ಒಳ್ಳೆಯದು: ಕರೀನಾ ಕಪೂರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Kareena Kapoor Instagram Post

ಬೆಂಗಳೂರು: ಯೋಗ ಎಂದರೆ ಬಾಲಿವುಡ್ ಮಂದಿಗೂ ಅಚ್ಚುಮೆಚ್ಚು. ಅದರಲ್ಲೂ ಸೆಲೆಬ್ರಿಟಿಗಳಂತೂ ದಿನನಿತ್ಯದ ಕೆಲಸದ ನಡುವೆಯೂ ಯೋಗಕ್ಕೆ ಇಂತಿಷ್ಟು ಸಮಯ ಮೀಸಲಿಟ್ಟಿರುತ್ತಾರೆ.

ಬಾಲಿವುಡ್ ನಟಿ ಕರೀನಾ ಕಪೂರ್ ಕೂಡ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ಸೂರ್ಯ ನಮಸ್ಕಾರ ಮಾಡುವ ವಿಡಿಯೊ ಒಂದನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಒಂದಲ್ಲ, ಎರಡಲ್ಲ.. ಬದಲಾಗಿ 108 ಬಾರಿ ಸೂರ್ಯ ನಮಸ್ಕಾರ ಮಾಡಿದ್ದಾರೆ ಕರೀನಾ ಕಪೂರ್!

ಎರಡು ಮಕ್ಕಳ ತಾಯಿಯಾಗಿರುವ ಕರೀನಾ ಕಪೂರ್, ಹೆರಿಗೆಯ ಬಳಿಕ ದೇಹವನ್ನು ಫಿಟ್ ಆಗಿ ಇರಿಸಲು ಯೋಗದ ಮೊರೆ ಹೋಗಿದ್ದಾಗಿ ಹೇಳಿಕೊಳ್ಳುತ್ತಿದ್ದರು.

ಜತೆಗೆ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ ಎನ್ನುವ ಮಾತುಗಳನ್ನು ಕೂಡ ಕರೀನಾ, ಹಲವು ಸಂದರ್ಭಗಳಲ್ಲಿ ಜನರಿಗೆ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು