ಬಾಲಿವುಡ್ ನಟ ಸುಶಾಂತ್ ರಜಪೂತ್ ಸಿಂಗ್ ಸಾವಿನ ಸುದ್ದಿ ಎಲ್ಲರ ಮನ ಕಲಕಿದೆ.ಸುಶಾಂತ್ ಖಿನ್ನತೆಯಿಂದ ಹೊರಬರಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವವರ ನಡುವೆ ಈ ಮಾನಸಿಕ ತೊಳಲಾಟವನ್ನು ಮೀರುವುದು ಹೇಗೆ ಎಂದು ಕೆಲ ಕಲಾವಿದರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಳ್ಳುತ್ತಿದ್ದಾರೆ.

ಚಂದನವನದ'ಹಂಬಲ್ ಪೊಲಿಟಿಶಿಯನ್‘ಡ್ಯಾನಿಶ್ ಸೇಠ್, ತಮ್ಮ ಟ್ವಿಟರ್ ಖಾತೆಯಲ್ಲಿ ತಾವು ಖಿನ್ನತೆಯಿಂದ ಬಳಲುತ್ತಿದ್ದ ಬಗ್ಗೆ ಬರೆದುಕೊಂಡಿದ್ದಾರೆ. ಖಿನ್ನತೆಗೆ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಡ್ಯಾನಿಶ್ ನಡೆಗೆನಟಿ ದೀಪಿಕಾ ಪಡುಕೋಣೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೇ ಡ್ಯಾನಿಶ್ ಬರಹದಲ್ಲಿ ಯಾವ ಔಷಧ ತೆಗೆದುಕೊಳ್ಳುತ್ತೇನೆ ಎಂಬ ಹೆಸರೂ ಸೇರಿಸಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. 'ಮಾನಸಿಕ ಅಸ್ವಸ್ಥತೆಯ ಬಗ್ಗೆ ನಿಮ್ಮ ಅನುಭವವನ್ನು ಹಂಚಿಕೊಳ್ಳುತ್ತಿರುವುದು ಅತ್ಯಂತ ಹೃದಯಸ್ಪರ್ಶಿ ವಿಷಯ. ಆದರೆ ಔಷಧಿಗಳ ಹೆಸರುಮತ್ತು ಡೋಸೇಜ್ ಬಗ್ಗೆ ತಿಳಿಸದಿರುವುದೇ ಉತ್ತಮ. ಯಾಕೆಂದರೆ, ಒಂದೇ ರೀತಿಯ ಔಷಧಿ ಎಲ್ಲರಿಗೂ ಹೊಂದಿಕೆಯಾಗುವುದಿಲ್ಲ. ಇದು ದುರುಪಯೋಗ ಆಗುವ ಸಾಧ್ಯತೆ ಹೆಚ್ಚು'ಎಂದು ಪ್ರತಿಕ್ರಿಯಿಸಿದ್ದಾರೆ.

'ಹಂಬಲ್ ಪೊಲಿಟಿಶಿಯನ್ ನೋಗರಾಜ್' ಕಾಮಿಡಿ ಸಿನಿಮಾದ ಮೂಲಕ ಪ್ರಚಾರಕ್ಕೆ ಬಂದಡ್ಯಾನಿಶ್, ವೈಯಕ್ತಿಕ ಬದುಕಿ ನಲ್ಲಿಖಿನ್ನತೆಗೆ ಒಳಗಾದವರು. 'ಖಿನ್ನತೆಗೆ ಮೂರು ವರ್ಷದಿಂದಚಿಕಿತ್ಸೆ ಪಡೆಯುತ್ತಿದ್ದೇನೆ. ಔಷಧಿ ತೆಗೆದುಕೊಳ್ಳದೆ ಇದ್ದರೆ ರಾತ್ರಿ ನಿದ್ದೆ ಬರುವುದಿಲ್ಲ.ಮನಸ್ಸಿನಲ್ಲಿ ಆಗುವ ಕಷ್ಟವನ್ನುಪದಗಳಲ್ಲಿ ಹೇಳಿಕೊಳ್ಳಲು ಸಾಧ್ಯವಿಲ್ಲ.ವೈದ್ಯರೇ ಏಕೈಕ ಭರವಸೆ'ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.

ಇವರ ಬರಹಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಖಿನ್ನತೆಯಿಂದ ಬಳಲುತ್ತಿರುವುದನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಧೈರ್ಯಬೇಕು. ಇದು ಎಲ್ಲರಿಗೂ ಸ್ಫೂರ್ತಿ ಎಂದಿದ್ದಾರೆ.

ಡ್ಯಾನಿಶ್ ಸೇಠ್ ಸದ್ಯ ‘ಫ್ರೆಂಚ್ ಬಿರಿಯಾನಿ‘ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ನಲ್ಲಿ ಸಿನಿಮಾ ಮೂಡಿಬಂದಿದೆ. ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲಾಗುತ್ತಿದೆ. ಜುಲೈ 24ಕ್ಕೆ ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ತೆರೆಗೆ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.