ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯೋಗ ಎಂದರೆ ಸುಮ್ಮನೆಯಲ್ಲ.. ವಿಡಿಯೊ ಹಂಚಿಕೊಂಡ ಶಾಹೀದ್ ಕಪೂರ್ ಪತ್ನಿ ಮೀರಾ

ಬೆಂಗಳೂರು: ಬಾಲಿವುಡ್‌ ನಟ ಮತ್ತು ನಟಿಯರು ಯೋಗ ಮತ್ತು ಫಿಟ್ನೆಸ್ ಕುರಿತು ಕಾಳಜಿ ಹೊಂದಿರುವುದು ಮತ್ತು ಅದನ್ನು ಸಾಮಾಜಿಕ ತಾಣಗಳ ಮೂಲಕ ಪ್ರಸ್ತುತಪಡಿಸುತ್ತಿರುತ್ತಾರೆ.

ಈ ಬಾರಿ ನಟ ಶಾಹೀದ್ ಕಪೂರ್ ಪತ್ನಿ ಮೀರಾ ರಜಪೂತ್, ಯೋಗ ಕುರಿತು ಹಾಸ್ಯಭರಿತ ಕಿರು ವಿಡಿಯೊ ಒಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಯೋಗ ಮಾಡುವಾಗಿನ ಸಂದರ್ಭ ಮತ್ತು ಮನದಲ್ಲಿ ಮೂಡುವ ಆಲೋಚನೆಯನ್ನು, ಕಲ್ಪನೆಗಳು ಮತ್ತು ನೈಜತೆ ಎಂಬ ಹೆಸರಿನಲ್ಲಿ ಮೀರಾ, ಕಿರು ವಿಡಿಯೊದಲ್ಲಿ ಪೋಸ್ಟ್ ಮಾಡಿದ್ದಾರೆ.

ಮೀರಾ, ಮದುವೆಯಾಗಿ, ತಾಯಿಯಾದ ಬಳಿಕವೂ ಫಿಟ್ನೆಸ್ ಕುರಿತು ಹೆಚ್ಚಿನ ಒಲವು ಹೊಂದಿದ್ದು, ಸಾಮಾಜಿಕ ತಾಣಗಳಲ್ಲಿ ವರ್ಕೌಟ್ ಕುರಿತ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಈ ಮೊದಲು ಕೂಡ ಮೀರಾ, ವರ್ಕೌಟ್ ಮಾಡುವ ಸಂದರ್ಭದಲ್ಲಿ ಪತಿ ಶಾಹೀದ್ ಕಪೂರ್ ಜತೆಗಿನ ಫೋಟೊಗಳನ್ನು ಪೋಸ್ಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT