ಮಂಗಳವಾರ, ಆಗಸ್ಟ್ 9, 2022
20 °C
ನಟಿಯರು ಮದುವೆಯಾಗುವುದಕ್ಕೆ ಇಷ್ಟ ಪಡುವುದಿಲ್ಲ

Puri Musings: ನಟಿ ಚಾರ್ಮಿ ಕೌರ್ ಮದುವೆಯಾಗದಿರುವುದಕ್ಕೆ ಕಾರಣ ಇದು!

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆಲುಗಿನ ಖ್ಯಾತ ಸಿನಿಮಾ ನಿರ್ದೇಶಕ ಪುರಿ ಜಗನ್ನಾಥ್ ಅವರು ಇತ್ತೀಚಿಗೆ ಸಾಕಷ್ಟು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಹೊಸ ಪ್ರಯತ್ನವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ.

ಪುರಿ ಜಗನ್ನಾಥ್ ಅವರು ತಮ್ಮ ಅಧಿಕೃತ ಯೂಟ್ಯೂಬ್ ತಾಣದಲ್ಲಿ Puri Musings ಎಂಬ ಆಡಿಯೊ ಸರಣಿಗಳನ್ನು ಆರಂಭಿಸಿದ್ದು, ಇದರಲ್ಲಿ ಅವರು ತಮ್ಮದೇಯಾದ ಶೈಲಿಯಲ್ಲಿ ಜೀವನದ ಬಗ್ಗೆ ಫಿಲಾಸಫಿಯನ್ನು ಹೇಳುತ್ತಿದ್ದಾರೆ.

ಹೀಗೆ ಕಳೆದ ವಾರ Puri Musings ನಲ್ಲಿ ಬಂದ ಸರಣಿಯಲ್ಲಿ ಅವರು ಮದುವೆಯ ಬಗ್ಗೆ ಮಾತನಾಡಿದ್ದಾರೆ. ಆಡಿಯೊ ಕ್ಲಿಪ್‌ನಲ್ಲಿ, ಪುರಿ ಜಗನ್ನಾಥ್, ‘ಮದುವೆಯಾಗಬೇಡಿ, ಏಕೆಂದರೆ ಒಂಟಿಯಿದ್ದವರು ಮದುವೆಯ ನಂತರವೂ ಒಂಟಿಯಾಗಬಹುದು. ಮೂಲತಃ ಪುರುಷರು ಮತ್ತು ಮಹಿಳೆಯರನ್ನು ಮದುವೆಯಾಗಲು ವಿನ್ಯಾಸಗೊಳಿಸಿಲ್ಲ. ಮದುವೆಯೇ ಬೇರೆ, ಜೀವನವೇ ಬೇರೆ. ಅದಕ್ಕಾಗಿಯೇ ವಿಚ್ಚೇಧನವೇ ಇಂದು ಹೆಚ್ಚು ಸಾಮಾನ್ಯವಾಗಿದೆ‘ ಎಂದಿದ್ದಾರೆ.

ಜೀವನವನ್ನು ಅನುಭವಿಸುವ ಬಗ್ಗೆ ಅವರು ತಮ್ಮ ಉಪದೇಶಗಳನ್ನು ಹೇಳಿದ್ದಾರೆ. ಅಲ್ಲದೇ ನಟಿಯರು ಮದುವೆಯಾಗಲು ಇಷ್ಟಪಡುವುದಿಲ್ಲ ಎಂದಿದ್ದಾರೆ. ಹೀಗಾಗಿಯೇ, ನೆಟ್ಟಿಗರು ಪುರಿ ಅವರ ಮಾತುಗಳನ್ನು ನಟಿ ಚಾರ್ಮಿ ಕೌರ್ ಅವರಿಗೆ ಲಿಂಕ್ ಮಾಡಿದ್ದಾರೆ.

ವಯಸ್ಸು 34 ಆದರೂ, ಪುರಿ ಅವರ ಉಪದೇಶಗಳಿಂದ ಚಾರ್ಮಿ ಇದುವರೆಗೆ ಮದುವೆಯಾಗದೇ ಇರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಾರ್ಮಿ ಇತ್ತೀಚೆಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದು, ಪುರಿ ಜಗನ್ನಾಥ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ ಸದ್ಯ ಅವರು ವಿಜಯ್ ದೇವೇರಕೊಂಡ ಮತ್ತು ಅನನ್ಯಾ ಪಾಂಡೆ ನಟಿಸಿರುವ ‘ಲಿಗರ್’ ಸಿನಿಮಾ ನಿರ್ಮಾಣ ನೋಡಿಕೊಳ್ಳುತ್ತಿದ್ದಾರೆ. ಪುರಿ ಅವರ ಮಗ ಆಕಾಶ್  ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ರೊಮ್ಯಾಂಟಿಕ್’ ಚಿತ್ರಕ್ಕೂ ಅವರು ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಈ ಮಳೆ ನೋಡಿ ನರ್ಸರಿ ರೈಮ್ಸ್ ನೆನಪಾಗುತ್ತಿದೆ: ಅನುಷ್ಕಾ ಶರ್ಮಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು