ಶನಿವಾರ, ಅಕ್ಟೋಬರ್ 16, 2021
22 °C

ಗೌರಿ ಖಾನ್ ಬರ್ತ್‌ಡೇ: ಹಳೆಯ ಫೋಟೊ ಪೋಸ್ಟ್ ಮಾಡಿದ ಸುಹಾನಾ ಖಾನ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Suhana Khan Insta Post

ಬೆಂಗಳೂರು: ಬಾಲಿವುಡ್‌ ನಟಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಹೀಗಾಗಿ ಶಾರುಖ್ ಕುಟುಂಬ ಮೌನಕ್ಕೆ ಶರಣಾಗಿದೆ.

ಈ ಮಧ್ಯೆ, ಶಾರುಖ್ ಪತ್ನಿ, ಗೌರಿ ಖಾನ್ ಅವರ ಹುಟ್ಟುಹಬ್ಬವಿದ್ದು, ಪುತ್ರಿ ಸುಹಾನಾ ಖಾನ್ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

ಶಾರುಖ್ ಮತ್ತು ಗೌರಿ ಅವರ ಹಳೆಯ, ಕಪ್ಪು ಬಿಳುಪಿನ ಚಿತ್ರ ಇದಾಗಿದ್ದು, ‘ಹ್ಯಾಪಿ ಬರ್ಡ್‌ಡೇ ಮಾ’ ಎಂದು ಸುಹಾನಾ ತಾಯಿಗೆ ಶುಭ ಹಾರೈಸಿದ್ದಾರೆ.

ಗೌರಿ ಖಾನ್ ಅವರು ಒಳಾಂಗಣ ವಿನ್ಯಾಸ ಮತ್ತು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಬಾರಿ ಪುತ್ರನ ಡ್ರಗ್ಸ್ ಪ್ರಕರಣ ಮತ್ತು ವಿಸ್ತರಣೆಯಾಗಿರುವ ನ್ಯಾಯಾಂಗ ಬಂಧನ, ಕುಟುಂಬಕ್ಕೆ ಸವಾಲಾಗಿ ಪರಿಣಮಿಸಿದೆ.

ಗೌರಿ ಖಾನ್ ಅವರಿಗೆ ಸುಸಾನೆ ಖಾನ್ ಮತ್ತು ಫರಾ ಖಾನ್ ಕೂಡ ಹುಟ್ಟುಹಬ್ಬದ ಶುಭಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು