ನಾಲ್ಕು ವರ್ಷದ ಹಿಂದಿನ ಕತೆ. ರವಿತೇಜಾ ಅವರೊಂದಿಗೆ ‘ಬೆಂಗಾಲ್ ಟೈಗರ್’ ಸಿನಿಮಾದಲ್ಲಿ ನಟಿ ರಾಶಿ ಖನ್ನಾ ಬಿಕಿನಿ ತೊಟ್ಟು ನೀರಿನಿಂದ ಎದ್ದು ನಡೆದು ಬರುವ ದೃಶ್ಯವೊಂದನ್ನು ಚಿತ್ರಿಸಲಾಗಿತ್ತು.

ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ರಾಶಿ ಖನ್ನಾ ಅವರನ್ನು ಟೀಕಿಸಿದ್ದರು. ‘ನಟಿಯರು ಸೆಕ್ಸಿಯಾಗಿ ಕಾಣಲಿ ಎಂಬ ಉದ್ದೇಶಕ್ಕೆ ಈಜುಡುಗೆ ಹಾಕಿಸಲಾಗುತ್ತದೆ. ಆದರೆ ಇದರಲ್ಲಿ ರಾಶಿ ಆಂಟಿ ರೀತಿ ಕಾಣುತ್ತಿದ್ದಾರೆ’, ಈ ರೀತಿ ದೇಹ ಬೆಳಸಿಕೊಂಡ ಮೇಲೂ ನಟಿಯಾಗಿ ಹೇಗೆ ಮುಂದುವರಿಯುತ್ತಾರೊ..ಎನ್ನುವಂತಹ ಕಟು ಮಾತುಗಳನ್ನು ಅವರು ಎದುರಿಸಬೇಕಾಯಿತು. ಆ ನಂತರ ಅವರು ಸಾಕಷ್ಟು ಸಿನಿಮಾ ಮಾಡಿದ್ದರೂ ಮೊದಲಿನಂತೆ ತೂಕ ಇಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ಇದನ್ನೇ ಸವಾಲಾಗಿ ತೆಗೆದುಕೊಂಡ ರಾಶಿ, ಎರಡು ವರ್ಷ ಸತತವಾಗಿ ಫಿಟ್‌ನೆಸ್ ತರಬೇತಿ ಪಡೆದುಕೊಂಡಿದ್ದಾರೆ. ಮುಂದಿನ ಸಿನಿಮಾ ‘ವೆಂಕಿ ಮಾಮಾ’ದಲ್ಲಿ ರಾಶಿ ಅವರ ಹೊಸ ರೂಪ ನೋಡಲು ಸಿಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

‘ಈ ಸಿನಿಮಾ ತೆರೆಕಾಣುವ ದಿನಕ್ಕಾಗಿ ಕಾಯುತ್ತಿದ್ದೇನೆ. ವಿಭಿನ್ನವಾದ ಆಧುನಿಕ ಉಡುಗೆಗಳನ್ನು ನಾನು ಈ ಸಿನಿಮಾದಲ್ಲಿ ಹಾಕಿದ್ದೇನೆ. ಹೊಸ ಲುಕ್, ಸ್ಟೈಲ್‌ನಲ್ಲಿ ನನ್ನನ್ನು ನೋಡಬಹುದು’ ಎಂದು ಅವರು ಹೇಳಿದ್ದಾರೆ.

ವೆಂಕಟೇಶ್, ನಾಗ ಚೈತನ್ಯ ನಟನೆಯ ಈ ಸಿನಿಮಾ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಅದರಲ್ಲೂ ರಾಶಿ ಅವರ ಹೊಸ ಅವತಾರ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ರಾಜಮಂಡ್ರಿಯಲ್ಲಿ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಕೌಟುಂಬಿಕ ಸಂಬಂಧದ ಬಗ್ಗೆ ಇರುವ ಈ ಸಿನಿಮಾ ಮಾಸ್ ಪ್ರೇಕ್ಷಕರನ್ನು ಸೆಳೆಯಲಿದೆ ಎಂದು ನಾಗ ಚೈತನ್ಯ ಈಗಾಗಲೇ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ‘ರಾಶಿ ಇತ್ತೀಚಿನ ಫೋಟೊಗಳಲ್ಲಿ ತುಂಬಾ ಸಣ್ಣಗೆ ಕಾಣುತ್ತಿದ್ದಾರೆ. ಅವರ ಈ ಬದಲಾವಣೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರಂತೆ ಹೌದಾ? ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ‘ಈ ದಿನಕ್ಕಾಗಿಯೇ ನಾನು ಕಾಯುತ್ತಿದ್ದೆ. ನಾನು ನೆಟ್ಟಿಗರ ಆಕ್ರೋಶಕ್ಕೆ ಉತ್ತರ ನೀಡುತ್ತಿಲ್ಲ. ಆರೋಗ್ಯವೇ ಭಾಗ್ಯ. ಇದು ನನಗೆ ಗೊತ್ತಿರುವ ಸಂಗತಿ’ ಎಂದು ರಾಶಿ ಸಕಾರಾತ್ಮಕವಾಗಿ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.