ಕನ್ನಡ ಕಿರುತೆರೆ ನಟಿ ಮೌನ ಗುಡ್ಡೆಮನೆ ಈಗ ಆಟೊ ರಾಣಿಯಾಗಿ ಬೆಂಗಳೂರು ಸುತ್ತುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ರಾಮಾಚಾರಿ’ ಧಾರಾವಾಹಿಯ ಮೂಲಕ ಮೌನ ಗುಡ್ಡೆಮನೆ ಜನಪ್ರಿಯತೆ ಪಡೆದುಕೊಂಡಿದ್ದರು.
.ರಾಮಾಚಾರಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ದುಬೈಗೆ ಹಾರಿದ ನಟಿ ಮೌನ ಗುಡ್ಡೆಮನೆ.ಕೊನೆಗೊಂಡ ‘ರಾಮಾಚಾರಿ’ ಧಾರಾವಾಹಿ: ನಟಿ ಮೌನ ಗುಡ್ಡೆಮನೆ ಭಾವುಕ ಪೋಸ್ಟ್.
ಇದೀಗ ಜೀ ಕನ್ನಡದಲ್ಲಿ ಹೊಸದಾಗಿ ಆರಂಭವಾಗುತ್ತಿರುವ ‘ಕೃಷ್ಣ ರುಕ್ಕು’ ಧಾರಾವಾಹಿಯ ಮೂಲಕ ಮತ್ತೆ ನಟನೆಯನ್ನು ಶುರು ಮಾಡಿದ್ದಾರೆ. ಇದೇ ಮಾರ್ಚ್ 9ರಿಂದ, ಸಂಜೆ 6:30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಕೃಷ್ಣ ರುಕ್ಕು ಧಾರಾವಾಹಿ ಪ್ರಸಾರವಾಗುತ್ತಿದೆ. ಈ ಕುರಿತು ಜೀ ಕನ್ನಡ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಒಂದೊಂದೇ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ.

ಧಾರಾವಾಹಿ ಆರಂಭವಾಗುವ ಹೊತ್ತಲ್ಲೇ ಮೌನ ಗುಡ್ಡೆಮನೆ ಅವರು ಆಟೊ ಹತ್ತಿ ತಮ್ಮ ಪ್ರಚಾರವನ್ನು ಶುರು ಮಾಡಿದ್ದಾರೆ. ಆಟೊ ಮೇಲೆ ಶಂಕರ್ ನಾಗ್, ಪುನೀತ್ ರಾಜ್ಕುಮಾರ್ ಫೋಟೊವನ್ನು ಅಂಟಿಸಲಾಗಿದೆ. ಅದರ ಜೊತೆಗೆ ‘ಇಲ್ಲಿನ ಅನ್ನ ತಿನ್ನುವ ಮುನ್ನ ಕಲಿ ಕನ್ನಡವನ್ನ’, ‘ತಾಯಿಯ ಆರ್ಶೀವಾದ’, ‘ಒಡಹುಟ್ಟಿದವರು’, ಗರ್ಭಿಣಿಯರಿಗೆ ಉಚಿತ’ ಎಂದು ಆಟೊ ಮೇಲೆ ಬರೆಯಲಾಗಿದೆ.

ಚೂರಾದ ಕನ್ನಡೀಲೂ ನಗು ಕಾಣೋಳು ರುಕ್ಕು.. ಆದರೆ ಕಾಡೋ ನೆನಪಲ್ಲಿ ಬದುಕನ್ನೇ ಚೂರಾಗಿಸಿಕೊಂಡಿರೋನು ಕೃಷ್ಣ. ಇದೇ ಎಳೆಯಲ್ಲೇ ಹೊಸ ಕಥೆ ತೆರೆ ಮೇಲೆ ಬರುತ್ತಿದೆ. ರುಕ್ಕು ಪಾತ್ರದಲ್ಲಿ ನಟಿ ಮೌನ ಗುಡ್ಡೆಮನೆ ನಟಿಸುತ್ತಿದ್ದು, ಕೃಷ್ಣನ ಪಾತ್ರದಲ್ಲಿ ಅಕ್ಷಯ್ ನಾಯಕ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಧಾರಾವಾಹಿ ಪ್ರೋಮೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೀಕ್ಷಕರ ಗಮನ ಸೆಳೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.