ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿನ ನಿರೀಕ್ಷೆಯಲ್ಲಿ ಅಮೃತಾ –ರೂಪೇಶ್ ದಂಪತಿ: ಬೇಬಿ ಬಂಪ್ ಫೋಟೊ ವೈರಲ್‌

Last Updated 23 ಏಪ್ರಿಲ್ 2022, 9:00 IST
ಅಕ್ಷರ ಗಾತ್ರ

ಬೆಂಗಳೂರು: ಕಿರುತೆರೆ ನಟಿ ಅಮೃತಾ ನಾಯ್ಡು –ರೂಪೇಶ್‌ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

‘ನನ್ನಮ್ಮ ಸೂಪರ್‌ ಸ್ಟಾರ್’ ರಿಯಾಲಿಟಿ ಶೋನ ಮೂಲಕ ಮನೆ ಮಾತಾಗಿದ್ದ 6 ವರ್ಷದ ಪುಟಾಣಿ ಸಮನ್ವಿ ರಸ್ತೆ ಅಪಘಾತದಲ್ಲಿ ಮೃತಪಟ್ಟು ನಾಲ್ಕು ತಿಂಗಳು ಕಳೆದಿದೆ.

ಸದ್ಯ ಮಗುವಿನ ನಿರೀಕ್ಷೆಯಲ್ಲಿರುವ ಅಮೃತಾ, ರೂಪೇಶ್ ದಂಪತಿ ಇತ್ತೀಚೆಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ಬೇಬಿ ಬಂಪ್ ಫೋಟೊ ಹಂಚಿಕೊಂಡಿರುವ ಅಮೃತಾ, ತಮ್ಮ ದಿವಂಗತ ಮಗಳು ಸಮನ್ವಿಯನ್ನು ನೆನಪಿಸಿಕೊಂಡಿದ್ದಾರೆ.

‘ಆ ದುರಾದೃಷ್ಟದ ದಿನ ಸಿಡಿಲು ಬಡಿದ ನಂತರ ನನ್ನ ಪ್ರಪಂಚ ನಲುಗಿತ್ತು. ನನಗೆ ಹಿಡಿದಿಡಲು ಏನೂ ಇಲ್ಲ ಎಂದು ಅನಿಸಿತ್ತು. ನಾನು ಉಸಿರಾಡುತ್ತಿದ್ದರೂ ಒಳಗಡೆ ಸತ್ತು ಹೋಗಿದ್ದೇನೆ ಎಂದು ಭಾವಿಸಿದ್ದೆ. ಎಲ್ಲ ವಿಶೇಷ ವ್ಯಕ್ತಿಗಳ, ನಿಮ್ಮ ಹಾರೈಕೆಯಿಂದ ನನ್ನೊಳಗಿನ ಜೀವದ ನೆನಪಾಗುತ್ತಿತ್ತು. ನನ್ನೊಳಗೆ ಇನ್ನೊಂದು ಜೀವವಿದೆ. ನಾನು ಆ ಬೆಳಕನ್ನು ನೋಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನನ್ನೊಳಗಿನ ಪುಟ್ಟ ಜೀವ ತಾನು ಕಾಣುವಂತೆ ಮಾಡುತ್ತಿದೆ. ಜೀವನ ಅಂದರೆ ಅದು ನಾನು ಮಾತ್ರ ಅಲ್ಲ. ಎಂದಿಗೂ ಅಳಿಸಲಾಗದ ನೋವುಗಳು ಇರುತ್ತವೆ. ಆದರೂ ಎಲ್ಲ ಭಾವನೆಗಳನ್ನು ನಾನು ನನ್ನ ಮೇಲೆ ಹಾಕಿಕೊಳ್ಳಲಾಗದು. ಇಂದು ನೋವು ನನಗೆ ಮಾತ್ರ ಇರಲಿ. ಅದು ಯಾವುದಕ್ಕೆ ಕಾರಣಕ್ಕೂ ನನ್ನ ಮಗುವಿಗೆ ತಿಳಿಯಬಾರದು. ನಾನು ಖುಷಿಯಾಗಿರುವುದನ್ನು ಮಾತ್ರ ಆ ಮಗು ನೋಡಬೇಕು ಎಂದು ಅರಿತುಕೊಂಡಿದ್ದೇನೆ. ಎಲ್ಲ ಸರಿಯಾಗಿದ್ದರೆ ಈ ಮಗು ಖುಷಿ ಪಡೆಯಬೇಕು ಎಂದು ನಾನು ಅರ್ಥ ಮಾಡಿಕೊಂಡು ಈ ಫೋಟೋ ತೆಗೆಸಿಕೊಂಡಿದ್ದೇನೆ. ನನ್ನ ಸಮನ್ವಿ ಮತ್ತೆ ಬಂದರೆ ಎಲ್ಲವೂ ಫ್ರೆಶ್‌ (ಹೊಸತು) ಆಗಿರುತ್ತದೆ. ಹೊಸದಾಗಿ ಒಂದು ಶೇಡ್ ಬಂದರೆ ಅದು ನಮ್ಮ ಕುಟುಂಬ ಸೇರಿಕೊಳ್ಳುತ್ತದೆ. ನಾನು ಈ ಸಂಭ್ರಮವನ್ನು ಮಿಸ್ ಮಾಡಿಕೊಳ್ಳಲು ಬಯಸುವುದಿಲ್ಲ. ನೀವೆಲ್ಲ ನನ್ನ ಶಕ್ತಿಯಾಗಿ ಉಳಿದುಕೊಳ್ಳಲು ಸಹಾಯ ಮಾಡಿ’ ಎಂದು ಅಮೃತಾ ಬರೆದುಕೊಂಡಿದ್ದಾರೆ.

ಪಟಪಟನೆ ಮಾತನಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಪುಟಾಣಿ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಜನವರಿ 13ರಂದು ಬೆಂಗಳೂರಿನ ಕೋಣನಕುಂಟೆ ಬಳಿಯ ವಾಜರಹಳ್ಳಿ ಮುಖ್ಯರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಮನ್ವಿ ನಿಧನರಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯ ತಾಯಿ ಅಮೃತಾ ನಾಯ್ಡು ಪ್ರಾಣಾಪಾಯದಿಂದ ಪಾರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT