ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಅವಳ ಕೊನೆಯ ಮುತ್ತು: ಸಮನ್ವಿ ಬಗ್ಗೆ ತಾಯಿ ಅಮೃತಾ ರೂಪೇಶ್ ಭಾವುಕ ನುಡಿ

Last Updated 19 ಜನವರಿ 2022, 5:55 IST
ಅಕ್ಷರ ಗಾತ್ರ

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ‘ನನ್ನಮ್ಮ ಸೂಪರ್‌ ಸ್ಟಾರ್’ ರಿಯಾಲಿಟಿ ಶೋನ ಮೂಲಕ ಮನೆ ಮಾತಾಗಿದ್ದ ಪುಟಾಣಿ ಸಮನ್ವಿ ನಮ್ಮನ್ನು ಅಗಲಿ ಒಂದು ವಾರ ಕಳೆದಿದೆ. ಮುದ್ದಿನ ಮಗಳನ್ನು ಕಳೆದುಕೊಂಡಿರುವ ಅಮೃತಾ –ರೂಪೇಶ್‌ ದಂಪತಿಯ ನೋವು ಕಡಿಮೆಯಾಗಿಲ್ಲ.

ಇದೀಗ ಸಮನ್ವಿ ಜೊತೆಗಿನ ವಿಡಿಯೊವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅಮೃತಾ, ಇದು ಅವಳ (ಸಮನ್ವಿ) ಕೊನೆಯ ಮುತ್ತು ನಾನು ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಅಮೃತಾ ಅವರಿಗೆ ಸಮನ್ವಿ ಪ್ರೀತಿಯಿಂದ ಮುತ್ತು ಕೊಡುತ್ತಿರುವ ದ್ಯಶ್ಯ ನೋಡುಗರ ಹೃದಯ ಸ್ಪರ್ಶಿಸುವಂತಿದೆ. ಈ ವಿಡಿಯೊವನ್ನು 29 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 7 ಸಾವಿರ ಮಂದಿ ಇಷ್ಟಪಟ್ಟಿದ್ದಾರೆ.

‘ಸಮಾಧಾನ ಮಾಡಿಕೊಳ್ಳಿ ಅಮೃತಾ, ಸಮನ್ವಿ ಮತ್ತೆ ಮಗುವಾಗಿ ಹುಟ್ಟಿ ಬರುತ್ತಾಳೆ’ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

ಪಟಪಟನೆ ಮಾತನಾಡುತ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಪುಟಾಣಿ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಜ.13ರಂದು (ಗುರುವಾರ) ಬೆಂಗಳೂರಿನ ಕೋಣನಕುಂಟೆ ಬಳಿಯ ವಾಜರಹಳ್ಳಿ ಮುಖ್ಯರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಮನ್ವಿ ನಿಧನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT