ನಟ ಅನಿಲ್ ಕುಮಾರ್ ನಿಧನ

ಶನಿವಾರ, ಏಪ್ರಿಲ್ 20, 2019
29 °C

ನಟ ಅನಿಲ್ ಕುಮಾರ್ ನಿಧನ

Published:
Updated:

ಬೆಂಗಳೂರು: ಕಿರುತೆರೆ ಮತ್ತು ಹಿರಿತೆರೆ ನಟ ಅನಿಲ್ ಕುಮಾರ್ (48) ಅವರು ಬಹು ಅಂಗಾಂಗಗಳ ವೈಫಲ್ಯದಿಂದ ಬೆಂಗಳೂರಿನಲ್ಲಿ ಬುಧವಾರ ನಿಧನರಾದರು.

ಅನಿಲ್ ಅವರು ಹೆಗ್ಗೋಡಿನ ‘ನೀನಾಸಂ’ನಲ್ಲಿ ತರಬೇತಿ ಪಡೆದವರು. ಇವರು ನೀನಾಸಂನಲ್ಲಿ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ನಟ ದರ್ಶನ್ ಅವರು ಸಹಪಾಠಿಯಾಗಿದ್ದರು.

ಮೂಡಲಮನೆ ಧಾರಾವಾಹಿ ಮೂಲಕ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಹೆಸರು ಸಂಪಾದಿಸಿದವರು ಅನಿಲ್. ಬ್ರಹ್ಮಗಂಟು ಧಾರಾವಾಹಿಯಲ್ಲಿ ಕೂಡ ಅವರು ಅಭಿನಯಿಸಿದ್ದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 24

  Sad
 • 4

  Frustrated
 • 2

  Angry

Comments:

0 comments

Write the first review for this !