ಕನ್ನಡದ ಜನಪ್ರಿಯ ನಟಿ, ನಿರೂಪಕಿ ಅನುಶ್ರೀ ಅವರು ‘ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ, ಮುಂದೆ ನನ್ನ ಬೈಯ್ಯುವವರೆಲ್ಲ ಅಂದಣವಿರಲಿ' ಎಂಬ ಸಾಲುಗಳನ್ನು ಹೇಳಿರುವ ವಿಡಿಯೊ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಬಿಗ್ಬಾಸ್ ಮಾಜಿ ಸ್ಪರ್ಧಿ, ಕಾಮಿಡಿ ಕಿಲಾಡಿಗಳು, ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಂತಹ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಮೂಲಕ ಅನುಶ್ರೀ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಉದ್ಯಮಿ ರೋಶನ್ ಅವರನ್ನು ಮದುವೆಯಾಗಿದ್ದರು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನ ನಿರೂಪಕರಾಗಿದ್ದಾರೆ.
.ಕಾಶ್ಮೀರವನ್ನು ಕಣ್ತುಂಬಿಕೊಂಡ ನಿರೂಪಕಿ, ಶ್ವೇತಾ ಚಂಗಪ್ಪ: ಚಿತ್ರಗಳು ಇಲ್ಲಿವೆ.ರಾಮಾಚಾರಿ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ದುಬೈಗೆ ಹಾರಿದ ನಟಿ ಮೌನ ಗುಡ್ಡೆಮನೆ.
ಈ ನಡುವೆ ನಿರೂಪಕಿ ಅನುಶ್ರೀ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೊದಲ್ಲಿ ಅವರು, ‘ಹಿಂದೆ ನನ್ನ ಬೈದವರೆಲ್ಲಾ ಚೆನ್ನಾಗಿರಲಿ, ಮುಂದೆ ನನ್ನ ಬೈಯ್ಯುವರೆಲ್ಲ ಅಂದಣವಿರಲಿ, ಕುಂದು ಇಟ್ಟವರೆಲ್ಲಾ ಕುದುರೆಯ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಬತ್ತದ ಗದ್ದೆ ಬೆಳೆಯಲಿ, ಜನರೊಳಗೆ ಮಾನಭಂಗ ಮಾಡಿದವರಿಗೆ ಜೇನು ತುಪ್ಪ ಸಕ್ಕರೆ ಊಟ ಆಗಲಿ, ಅವರಿಗೆ ಹಾನಿ ಬಾರದಂತಹ ಲೋಕ ಆಗಲಿ, ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು ಜ್ಞಾನ ಭಕ್ತಿ ಕೊಡು ಎಮಗೆ ಇದೊಂದೇ ದೊಡ್ಡದು’ ಎಂದು ಕನಕದಾಸರ ಸಾಲುಗಳನ್ನು ಹೇಳಿದ್ದಾರೆ.

‘ಇವತ್ತು ಯಾಕೋ ಗೊತ್ತಿಲ್ಲ ಕನಕದಾಸರ ಪದ್ಯದ ಸಾಲು ನನಗೆ ನೆನಪಾಯಿತು. 2026ರಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಅಂತ ಆಶಿಸುತ್ತೇನೆ. ಒಳ್ಳೆಯದೇ ಮಾತಾಡೋಣ, ಒಳ್ಳೆಯದೇ ಯೋಚಿಸೋಣ, ಒಳ್ಳೆಯದೇ ಬಯಸೋಣ’ ಎಂದು ಹೇಳಿದ್ದಾರೆ.
.ಸ್ವಂತ ಅಣ್ಣನಂತೆ ಮದ್ವೆ ಮಾಡಿಸಿದ್ರು: ನಿರ್ಮಾಪಕರ ನೆನೆದು ಕಣ್ಣೀರಿಟ್ಟ ಅನುಶ್ರೀ.
ಅದರ ಜೊತೆಗೆ ‘ಇತರರ ಬಗ್ಗೆ ಅಹಿತಕರವಾದ ಮಾತು.. ಈ ವರ್ಷವಾದರೂ ಹಿತವಾಗಲಿ. ಸಾಮಾಜಿಕ ಮಾಧ್ಯಮವನ್ನು ಒಳ್ಳೆಯದಕ್ಕಾಗಿ ಬಳಸಿ ಮತ್ತು ಇತರರನ್ನು ಮೇಲಕ್ಕೆತ್ತಿ, ಅವರನ್ನು ಕೆಡವಬೇಡಿ’ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಅನುಶ್ರೀ ಅವರ ಮಾತುಗಳನ್ನು ಹಲವರು ಟ್ರೋಲ್ ಮಾಡಿ, ವಿಡಿಯೊ, ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.